ಪಾಪ್‍ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೆ ನಾಯಕಿಯಾಗಿ ನಿವೇದಿತಾ ಬಂದಿದ್ದಾರೆ. ಶುದ್ಧಿ ಚಿತ್ರದ ನಂತರ ತೆರೆಯ ಮೇಲೆ ಕಾಣಿಸಿಕೊಳ್ಳದ ನಿವೇದಿತಾ, ರಂಗಭೂಮಿ, ಪತ್ರಿಕೆಯಲ್ಲಿ ಅಂಕಣಗಳಲ್ಲಿ ತೊಡಗಿಸಿಕೊಂಡಿದ್ದರು. ಈಗ ಸೂರಿಯ ಚಿತ್ರದಲ್ಲಿ ದೇವಿಕಾ ಆಗಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಮೂವರು ನಾಯಕಿಯರಂತೆ. ಆ ಮೂರು ನಾಯಕಿಯರಲ್ಲಿ ನಿವೇದಿತಾ ಅವರದ್ದು ಪ್ರಮುಖ ಪಾತ್ರ.
ಅವ್ವ ಚಿತ್ರದಲ್ಲಿ ಸ್ಮಿತಾ ಆಗಿದ್ದಾಗಿನಿಂದಲೂ ನಾನು ನಿವೇದಿತಾ ಅವರನ್ನು ನೋಡಿದ್ದೇನೆ. ಆಕೆಗೆ ಕಂಗನಾ, ವಿದ್ಯಾಬಾಲನ್ ರೀತಿ, ಭಾವನೆಗಳನ್ನು ಸಲೀಸಾಗಿ ಹೊರಹೊಮ್ಮಿಸುವ ಶಕ್ತಿಯಿದೆ. ಹೀಗಾಗಿ ಪಾಪ್‍ಕಾರ್ನ್ ಚಿತ್ರದ ಪಾತ್ರಕ್ಕೆ ಆಕೆ ಸೂಕ್ತ ಆಯ್ಕೆ ಎನ್ನಿಸಿತು ಎಂದು ಹೇಳಿಕೊಂಡಿದ್ದಾರೆ ಸೂರಿ.
ಕೆಲವು ನಿರ್ದೇಶಕರ ಜೊತೆ ಕೆಲಸ ಮಾಡಲೇಬೇಕು ಎಂಬ ಆಸೆಯಿರುತ್ತೆ. ನಾನು ಹಾಗೆ ಆಸೆಪಟ್ಟ ನಿರ್ದೇಶಕರಲ್ಲಿ ಸೂರಿ ಸರ್ ಒಬ್ಬರು. ಈಗ ಅವರ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಪಾತ್ರದ ಎಳೆಯನ್ನು ವಿವರಿಸಿದ್ದಾರೆ. ಇಷ್ಟವಾಗಿದೆ ಎಂದು ಹೇಳಿಕೊಂಡಿದ್ದಾರೆ ನಿವೇದಿತಾ.
ಟಗರು ಚಿತ್ರದ ನಂತರ, ಈ ಚಿತ್ರದಲ್ಲೂ ಕೆ.ಪಿ.ಶ್ರೀಕಾಂತ್, ಸೂರಿ ಜೋಡಿ ಒಂದಾಗುತ್ತಿದೆ. ಸುರೇಂದ್ರನಾಥ್ ಅವರೇ ಸೂರಿಯ ಜೊತೆ ಕಥೆ ಬರೆಯೋಕೆ ಕುಳಿತಿದ್ದಾರೆ. ಡಾಲಿ ಧನಂಜಯ್ ಹೀರೋ ಆಗಿರುವ ಚಿತ್ರದ ಚಿತ್ರೀಕರಣ ಜೂನ್‍ನಿಂದ ಶುರುವಾಗಲಿದೆ.
ಅಂದಹಾಗೆ.. ಪಾಪ್‍ಕಾರ್ನ್ ಮಂಕಿ ಟೈಗರ್ ಅನ್ನೋ ಟೈಟಲ್ ಕೊಟ್ಟಿದ್ದು ದುನಿಯಾ ಸೂರಿ ಪುತ್ರ ಪೃಥ್ವಿಯಂತೆ.