ಬೆಂಕಿಯಲ್ಲಿ ಅರಳಿದ ಹೂವು.. ಸುಹಾಸಿನಿ ಎಂಬ ಕಲಾವಿದೆಯನ್ನು ಕನ್ನಡಕ್ಕೆ ಪರಿಚಯಿಸಿದ್ದ ಸಿನಿಮಾ. ಮಧ್ಯಮ ವರ್ಗದ ಕುಟುಂಬದ ನೋವು ನಲಿವು ಪ್ರೀತಿ ತ್ಯಾಗಗಳ ಕಥೆಯಿದ್ದ ಚಿತ್ರ ಇಂದಿಗೂ ನೋಡಬೇಕೆನ್ನಿಸುವ ಕ್ಲಾಸ್ ಚಿತ್ರ. ಈಗ ಅದೇ ಟೈಟಲ್‍ನಲ್ಲಿ ಮತ್ತೊಂದು ಬೆಂಕಿಯಲ್ಲಿ ಅರಳಿದ ಹೂವು ಸಿದ್ಧವಾಗಿದೆ. ಬಿಗ್‍ಬಾಸ್ ಸ್ಪರ್ಧಿಯಾಗಿದ್ದ ಅನುಪಮಾ ಚಿತ್ರದ ನಾಯಕಿ. ದೇವಿಶ್ರೀಪ್ರಸಾದ್ ಚಿತ್ರದ ನಿರ್ದೇಶಕರು. ವಿ.ಮನೋಹರ್ ಸಂಗೀತವಿರುವ ಚಿತ್ರದ ಚಿತ್ರೀಕರಣ ಈಗ ಕೊನೆಯ ಹಂತದಲ್ಲಿದೆ.
ಇದು ಗಾರ್ಮೆಂಟ್ಸ್ ನೌಕರರ ಕಥೆ. ಅನುಪಮಾ ಇಲ್ಲಿ ಗಾರ್ಮೆಂಟ್ ಉದ್ಯೋಗಿಯಾಗಿ ನಟಿಸಿದ್ದಾರೆ. ಗಂಡ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಕುಳಿತಾಗ ಆ ಹೆಣ್ಣು ಸಂಸಾರವನ್ನು ಹೇಗೆ ನಿಭಾಯಿಸುತ್ತಾಳೆ ಅನ್ನೋದು ಚಿತ್ರದ ಕಥೆಯಂತೆ.
ಅಕ್ಕ ಧಾರಾವಾಹಿಯಿಂದ ಮನೆಮನೆ ಮಾತಾಗಿದ್ದ ಅನುಪಮಾ, ಈ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲೂ ಮಿಂಚಲು ಸಿದ್ಧರಾಗಿದ್ದಾರೆ.