ತಮಿಳು ಸೂಪರ್‍ಸ್ಟಾರ್ ಧನುಷ್, ಕನ್ನಡದಲ್ಲಿ ಸಿನಿಮಾ ನಿರ್ಮಿಸುತ್ತಿದ್ದಾರೆ. ಚಿತ್ರದ ಹೀರೋ ಅಲಮೇಲಮ್ಮ ಖ್ಯಾತಿಯ ರಿಷಿ. ಈಗ ಹೀರೋಯಿನ್ ಆಯ್ಕೆಯೂ ಆಗಿದೆ. ರೆಬಾ ಮೋನಿಕಾ ಜಾನ್ ಎಂಬ ಮಲೆಯಾಳಿ ಸುಂದರಿ, ರಿಚಿ ಎದುರು ನಾಯಕಿಯಾಗುತ್ತಿದ್ದಾರೆ.
ಇಲ್ಲಾವುದ್ದೀನ್ ನಿರ್ದೇಶನದ ಸಿನಿಮಾಗೆ ಧನುಷ್ ಅಷ್ಟೇ ಅಲ್ಲ, ನಿರ್ದೇಶಕ ಜೇಕಬ್ ವರ್ಗಿಸ್ ಕೂಡಾ ನಿರ್ಮಾಪಕರು. ರೆಬಾ, ಮಲೆಯಾಳಿಯಾದರೂ ಹುಟ್ಟಿದ್ದು ಹಾಗೂ ಮಾಸ್ಟರ್ ಡಿಗ್ರಿ ಓದಿದ್ದು ಬೆಂಗಳೂರಿನಲ್ಲೇ. ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ರೆಬಾ, ಮಾಡೆಲ್ ಕೂಡಾ ಹೌದು. ಚಿತ್ರದ ಚಿತ್ರೀಕರಣ ಬಿರುಸಿನಿಂದ ನಡೆಯುತ್ತಿದೆ.
Related Articles :-
Rishi To Star In Dhanush's First Kannada Production