ಉಪೇಂದ್ರ ಮತ್ತು ಆರ್.ಚಂದ್ರು ಕಾಂಬಿನೇಷನ್ನ ಐ ಲವ್ ಯು ಸಿನಿಮಾ, ಕಾಂಬಿನೇಷನ್ ಕಾರಣಕ್ಕೇ ನಿರೀಕ್ಷೆ ಹುಟ್ಟಿಸಿರುವ ಚಿತ್ರ. ರಾಜಕೀಯಕ್ಕೆ ಎಂಟ್ರಿ ಕೊಡುವುದಾಗಿ ಘೋಷಿಸಿ ವಿರಾಮ ತೆಗೆದುಕೊಂಡಿದ್ದ ಉಪೇಂದ್ರ, ಕಮ್ ಬ್ಯಾಕ್ ಮಾಡುತ್ತಿರುವ ಸಿನಿಮಾ ಐ ಲವ್ ಯೂ. ಪ್ರಜಾಕೀಯದಲ್ಲಿಯೇ ಮುಳುಗಿ ಹೋಗಿದ್ದ ಉಪೇಂದ್ರ, ಐ ಲವ್ ಯಊ ಚಿತ್ರ ಒಪ್ಪಿಕೊಳ್ಳೋಕೆ ಕಾರಣವೇನು..? ಚಿತ್ರದಲ್ಲಿ ಅಂತಹುದ್ದೇನಿದೆ ಅನ್ನೋ ಗುಟ್ಟನ್ನು ಸ್ವತಃ ಉಪೇಂದ್ರ ಬಿಚ್ಚಿಟ್ಟಿದ್ದಾರೆ.
ಸಿನಿಮಾದಲ್ಲಿ ಉಪ್ಪಿ ಸ್ಟೈಲ್ ಇದೆ. ಈಗಿನ ಜನರೇಷನ್ಗೆ ಒಗ್ಗುವಂತೆ ಕಥೆಯಿದೆ. ಚಿತ್ರದಲ್ಲಿ ಉಪೇಂದ್ರ ಅವರ ಸಿನಿಮಾಗಳನ್ನೇ ಬಳಸಿಕೊಂಡು ಕಥೆ, ಚಿತ್ರಕಥೆ ರೂಪಿಸಲಾಗಿದೆಯಂತೆ. ಇನ್ನು ಐ ಲವ್ ಯೂ ಶೀರ್ಷಿಕೆಯಲ್ಲಿ ತೋರಿಸಿರುವ ಕೈ ಸಿಂಬಲ್, ಡೆಫ್ & ಡಂಬರ್ನವರು ಬಳಸುವ ಲವ್ ಕೋಡ್ ಅಂತೆ.
ಹಾಗಾದರೆ, ಸಿನಿಮಾದ ಕಥೆಯೇನು..? ಮೂಗ, ಕಿವುಡರ ಲವ್ಸ್ಟೋರಿನಾ..? ಪ್ರೀತಿ ಪ್ರೇಮ ಅನ್ನೋದೆಲ್ಲ ಪುಸ್ತಕದ ಬದನೆಕಾಯ್ ಅನ್ನೋ ಡೈಲಾಗ್ ಇಲ್ಲೂ ಇರುತ್ತಾ..? ಸಿನಿಮಾ ರಿಲೀಸ್ ಆಗುವವರೆಗೆ ಕಾಯಬೇಕಷ್ಟೆ. ಶೂಟಿಂಗ್ ಈಗತಾನೇ ಶುರುವಾಗಿದೆ. ಶಿವರಾಜ್ಕುಮಾರ್ ಕ್ಲಾಪ್ ಮಾಡೋದ್ರೊಂದಿಗೆ ಶುರುವಾದ ಸಿನಿಮಾಗೆ ಜಿ.ಟಿ.ದೇವೇಗೌಡ, ಹೆಚ್.ಎಂ.ರೇವಣ್ಣರಂತ ಹಿರಿಯರು ಶುಭ ಕೋರಿದ್ದಾರೆ.