` ಕಲಿ ನಿಲ್ಲೋಕೆ ಮಹಾಭಾರತ ಕಾರಣ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
real reason behind kali was stopped
Kali Launch Image

ಶಿವರಾಜ್‍ಕುಮಾರ್, ಸುದೀಪ್ ಅಭಿನಯದ ಸಿನಿಮಾ ದಿ ವಿಲನ್ ಸಿದ್ಧವಾಗುತ್ತಿದೆ. ಪ್ರೇಮ್ ನಿರ್ದೇಶನದಲ್ಲಿ ರೆಡಿಯಾಗುತ್ತಿರುವ ಸಿನಿಮಾ ದಿನೇ ದಿನೇ ಕುತೂಹಲ ಸೃಷ್ಟಿಸುತ್ತಿರುವುದು ನಿಜ. ಆದರೆ, ಈ ಇಬ್ಬರು ಸ್ಟಾರ್‍ಗಳ ಕಾಂಬಿನೇಷನ್‍ನ ಚಿತ್ರ ಮೊದಲು ದಿ ವಿಲನ್ ಆಗಿರಲಿಲ್ಲ, ಕಲಿ ಎಂದಾಗಿತ್ತು. 

ಕಲಿ ಚಿತ್ರಕ್ಕೆ ಅದ್ಧೂರಿ ಚಾಲನೆ ಸಿಕ್ಕಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರೇ ಚಿತ್ರಕ್ಕೆ ಚಾಲನೆ ಕೊಟ್ಟಿದ್ದರು. ಬಹುತೇಕ ಕನ್ನಡ ಚಿತ್ರರಂಗ ಆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿತ್ತು. ಆದರೆ, ಕೆಲವೇ ದಿನಗಳಲ್ಲಿ ನಿಂತುಹೋಯ್ತು, ದಿ ವಿಲನ್ ಶುರುವಾಯ್ತು.

ಕಲಿ ನಿಂತು ಹೋಗಿದ್ದೇಕೆ ಅನ್ನೋ ಅನುಮಾನಗಳಿಗೆ ಈಗ ಸುದೀಪ್ ಉತ್ತರ ಕೊಟ್ಟಿದ್ದಾರೆ.

ಕಲಿ ಚಿತ್ರದಲ್ಲಿ ಪ್ರೇಮ್, ಮಹಾಭಾರತದ ಒಂದು ಎಳೆಯನ್ನಿಟ್ಟುಕೊಂಡು ಸ್ಕ್ರಿಪ್ಟ್ ಮಾಡಿದ್ದರು. ಅದರಲ್ಲಿ ಸುದೀಪ್‍ಗೆ ಕೆಲವು ನೆಗೆಟಿವ್ ಅಂಶಗಳು ಕಂಡು ಬಂದವು. ಮಹಾಭಾರತದ ಅದೊಂದು ಅಂಶವನ್ನು ಮುಟ್ಟಬೇಡಿ, ಪಾಸಿಟಿವ್ ಸ್ಕ್ರಿಪ್ಟ್ ಆಗಲ್ಲ ಎಂದರು ಸುದೀಪ್. ನಿರ್ಮಾಪಕ ಮನೋಹರ್ ಅವರಿಗೂ ವಿಷಯ ತಿಳಿಸಿದ್ರು. ಅವರಿಗೂ ಸುದೀಪ್ ಹೇಳಿದ್ದು ಸರಿ ಎನ್ನಿಸ್ತು. ಹೀಗಾಗಿ ಕಲಿ ಸಿನಿಮಾ ನಿಂತುಹೋಯ್ತು.

ಈ ಸಿನಿಮಾ ನಿಂತು ಹೋದರೆ, ಗಾಂಧಿನಗರದಲ್ಲಿ ಏನೇನೋ ಮಾತು ಶುರುವಾಗುತ್ತೆ ಅನ್ನೋ ಭಯ ಪ್ರೇಮ್‍ಗಿತ್ತು. ಆಗ ಸುದೀಪ್, ನಮ್ಮಿಬ್ಬರನ್ನೇ ಇಟ್ಟುಕೊಂಡು ಬೇರೆ ಸ್ಕ್ರಿಪ್ಟ್ ಮಾಡಿ ಎಂದರು. ಆಗ ಶುರುವಾಗಿದ್ದೇ ದಿ ವಿಲನ್. 

Matthe Udbhava Trailer Launch Gallery

Maya Bazaar Pressmeet Gallery