` ವಿಲನ್ ಮೂಲಕ ರಕ್ಷಿತಾ ರೀ ಎಂಟ್ರಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
rakshitha re entry with the villan
The Villain, Rakshitha Image

ಅಪ್ಪು ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ರಕ್ಷಿತಾ, ಕನ್ನಡ ಚಿತ್ರರಂಗ ಅಷ್ಟೇ ಅಲ್ಲ, ತೆಲುಗು, ತಮಿಳುನಲ್ಲೂ ಹವಾ ಸೃಷ್ಟಿಸಿದ್ದವರು. ಮದುವೆಯಾದ ಮೇಲೆ ಅಪ್ಪಟ ಗೃಹಿಣಿಯಾದ ರಕ್ಷಿತಾ ಕಿರುತೆರೆಗಷ್ಟೇ ಸೀಮಿತರಾಗಿಬಿಟ್ಟಿದ್ದಾರೆ. ಈಗ ಮತ್ತೊಮ್ಮೆ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ನಟಿಯಾಗಿ ಅಲ್ಲ, ಕಂಠದಾನ ಕಲಾವಿದೆಯಾಗಿ.

ದಿ ವಿಲನ್ ಚಿತ್ರದ ನಾಯಕಿ ಆ್ಯಮಿ ಜಾಕ್ಸನ್‍ಗೆ ಧ್ವನಿ ನೀಡುತ್ತಿರುವುದು ರಕ್ಷಿತಾ. ಯಾರ್ಯಾರದ್ದೋ ಧ್ವನಿ ಟೆಸ್ಟ್ ಮಾಡಿದ್ದ ಪ್ರೇಮ್‍ಗೆ, ಅದ್ಯಾವುದೂ ಇಷ್ಟವಾಗದೆ ಕೊನೆಗೆ ಓಕೆಯಾಗಿದ್ದು ರಕ್ಷಿತಾ ಅವರ ಧ್ವನಿ. ರಕ್ಷಿತಾ ಧ್ವನಿ ಡಿಫರೆಂಟಾಗಿದೆ ಅನ್ನೋ ಕಾರಣಕ್ಕೆ ರಕ್ಷಿತಾ ಅವರ ಧ್ವನಿಯನ್ನೇ ಫೈನಲ್ ಮಾಡಿದ್ದಾರೆ ಪ್ರೇಮ್. ಇದುವರೆಗೆ ತಮ್ಮ ಪಾತ್ರಕ್ಕಷ್ಟೇ ಧ್ವನಿ ನೀಡಿದ್ದ ರಕ್ಷಿತಾ, ಈ ಚಿತ್ರದ ಮೂಲಕ ಬೇರೊಬ್ಬರ ಪಾತ್ರಕ್ಕೂ ಧ್ವನಿ ಕೊಡುವ ಸಾಹಸಕ್ಕೆ ಕೈ ಹಾಕಿದ್ದಾರೆ.

ಅಂದಹಾಗೆ ರಕ್ಷಿತಾ ಅವರ ಧ್ವನಿಯನ್ನು ಆ್ಯಮಿ ಜಾಕ್ಸನ್ ಪಾತ್ರಕ್ಕೆ ಹೊಂದುತ್ತೆ ಎಂದು ಗುರುತಿಸಿದ ಮೊದಲಿಗರು ಪ್ರೇಮ್ ಅಲ್ಲ, ನಿರ್ದೇಶಕ ಮಹೇಶ್ ಬಾಬು ಹಾಗೂ ಸೌಂಡ್ ಎಂಜಿನಿಯರ್ ಆನಂದ್ ಅಂತೆ. ಒಟ್ಟಿನಲ್ಲಿ ಶಿವರಾಜ್‍ಕುಮಾರ್, ಸುದೀಪ್ ಕಾಂಬಿನೇಷನ್‍ನ ಅದ್ಧೂರಿ ಚಿತ್ರಕ್ಕೆ ಮತ್ತೊಬ್ಬ ಸ್ಟಾರ್ ಎಂಟ್ರಿ ಕೊಟ್ಟಿದ್ದಾರೆ.