ಸಾಮಾನ್ಯವಾಗಿ ಸೆಲಬ್ರಿಟಿಗಳು ತೀರಾ ತೀರಾ ಪರ್ಸನಲ್ ವಿಚಾರಗಳಿಗೆ ಯಾರಾದರೂ ಬಹಿರಂಗವಾಗಿ ಸಲಹೆ ಕೇಳಿದರೆ ಸುಮ್ಮನಿದ್ದು ಬಿಡ್ತಾರೆ. ಆದರೆ, ಕಿಚ್ಚ ಸುದೀಪ್ ಹಾಗಲ್ಲ, ಇತ್ತೀಚೆಗೆ ಅವರ ಜೀವ ಎಂಬ ಸುದೀಪ್ ಅವರ ಅಭಿಮಾನಿಯೊಬ್ಬ ತನ್ನ ಕಥೆ ಹೇಳಿಕೊಂಡಿದ್ದ. ಪ್ರೀತಿ ಮಾಡೋಕೆ ಆಸ್ತಿ, ಅಂತಸ್ತು, ಅಂದ ಚೆಂದ ಇವೆಲ್ಲ ಬೇಕಾ ಬಾಸ್ ಎಂದಿದ್ದ ಅಭಿಮಾನಿ, ಪ್ರೀತಿಸಿದವಳು ನನ್ನನ್ನು ಪ್ರೀತಿಸುತ್ತಿಲ್ಲ, ಅವಳಿಲ್ಲದೆ ಬದುಕೋಕೆ ಆಗ್ತಿಲ್ಲ ಎಂದು ಅಂಗಲಾಚಿದ್ದ.
ಆ ಪ್ರೇಮಿಗೆ ಸುದೀಪ್ ಲವ್‍ಗುರುವಿಗಿಂತ ಹೆಚ್ಚಾಗಿ ಲೈಫ್‍ಗುರುವಾಗಿದ್ದಾರೆ.
ನಮಗಿರುವುದು ಒಂದೇ ಬದುಕು, ಒಂದೇ ಚಾನ್ಸು. ಪ್ರೀತಿ ಬಿಟ್ಟುಕೊಡುವುದೇ ಹೊರತು, ಹಿಡಿದಿಟ್ಟುಕೊಡುವುದಲ್ಲ. ನಿನ್ನ ಅಪ್ಪ, ಅಮ್ಮನಿಗೆ ಒಳ್ಳೆಯವನಾಗಿರು. ನಿನ್ನನ್ನೇ ಪ್ರಪಂಚ ಎಂದುಕೊಂಡಿರುವ ಕೆಲವರಿರುತ್ತಾರೆ. ಅವರಿಗೆ ಒಳ್ಳೆಯವನಾಗಿರು. ಜೀವನವನ್ನು ಸುಂದರವಾಗಿ ಬದುಕು ಗೆಳೆಯಾ ಎಂದಿದ್ದಾರೆ ಕಿಚ್ಚ.
ಸುದೀಪ್ ಮಾತನ್ನು ಆ ಅಭಿಮಾನಿ ಅರ್ಥ ಮಾಡಿಕೊಳ್ಳಬೇಕಷ್ಟೆ. ಏಕೆಂದರೆ, ಇರೋದು ಒಂದೇ ಬದುಕು, ಸಿಕ್ಕಿರೋದು ಒಂದೇ ಚಾನ್ಸ್ ಅಲ್ವಾ..?