ಎನ್.ಸಿ.ಅಯ್ಯಪ್ಪ, ಮಾಜಿ ಕ್ರಿಕೆಟ್ ಆಟಗಾರ. ನಟಿ ಪ್ರೇಮಾ ಅವರ ಸಹೋದರ. ಅನು ಪೂವಮ್ಮ, ಚಿತ್ರನಟಿ. ಕರ್ವ ಚಿತ್ರದ ನಾಯಕಿ. ಇಬ್ಬರೂ ಈಗ ಸಪ್ತಪದಿ ತುಳಿಯಲು ಸಿದ್ಧರಾಗಿದ್ದಾರೆ. ಬೆಂಗಳೂರಿನ ಕೊಡವ ಸಮಾಜದಲ್ಲಿ ಅಪ್ಪಟ ಕೊಡವರ ಸಂಪ್ರದಾಯದಂತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಇಬ್ಬರ ಮಧ್ಯೆ ಹಲವು ವರ್ಷಗಳಿಂದ ಪ್ರೀತಿ ಅರಳಿತ್ತು. ಅದು ಎರಡೂ ಮನೆಯವರಿಗೆ ಗೊತ್ತಿತ್ತು. ಆ ಪ್ರೀತಿಗೆ ಈಗ ನಿಶ್ಚಿತಾರ್ಥದ ಅಂಕಿತ ಬಿದ್ದಿದೆ. ಮದುವೆ ಈಗಲ್ಲ, ಮುಂದಿನ ವರ್ಷ.