ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದ ಶೂಟಿಂಗ್ ಶುರುವಾಗಿದೆ. ಚಿತ್ರದ ಶೂಟಿಂಗ್‍ನ ಒಂದಷ್ಟು ಫೋಟೋಗಳನ್ನು ಸ್ವತಃ ಕಿಚ್ಚ ಸುದೀಪ್ ಅಭಿಮಾನಿಗಳ ಮುಂದಿಟ್ಟಿದ್ದಾರೆ. ಫೋಟೋಗಳನ್ನು ನೋಡಿದ್ರೆ, ಸುದೀಪ್ ಚಿತ್ರದಲ್ಲಿ ಶಂಕರ್‍ನಾಗ್ ಅಭಿಮಾನಿಯಾಗಿರಬಹುದಾ ಅನ್ನೋ ಅನುಮಾನ ಬರೋದು ಸುಳ್ಳಲ್ಲ. ಏಕೆಂದರೆ ಆ ಬೋರ್ಡ್‍ನಲ್ಲಿ ಆಟೋರಾಜ ಶಂಕರ್‍ನಾಗ್ ಗೆಳೆಯರ ಬಳಗ ಅನ್ನೋ ಬೋರ್ಡ್ ಇದೆ. ಭುವನೇಶ್ವರಿ ನಗರದ ಅಡ್ರೆಸ್ ಇದೆ. ಉಳಿದದ್ದು ಸಿನಿಮಾ ನೋಡಿದ ಮೇಲೆ ಹೇಳಬೇಕು.
ನಾಯಕಿಯಾಗಿ ಆಕಾಂಕ್ಷಾ ಸಿಂಗ್ ಎಂಬ ನಟಿ ನಟಿಸುತ್ತಿದ್ದಾರೆ. ನಾನು ಮೂಲತಃ ಮುಂಬೈನವಳು. ಕನ್ನಡದ ನಟರ ಬಗ್ಗೆ ಗೊತ್ತಿರಲಿಲ್ಲ. ಆದರೆ, ಸುದೀಪ್ ಬಗ್ಗೆ ತಿಳಿದ ಮೇಲೆ ಖುಷಿಯಾಯಿತು. ಅವರಿಂದ ಕಲಿಯುವುದು ತುಂಬಾ ಇದೆ ಎಂದು ಹೇಳಿಕೊಂಡಿದ್ದಾರೆ ಆಕಾಂಕ್ಷಾ. ನಮ್ಮಂತಹವರ ಕೆರಿಯರ್‍ಗೆ ಸುದೀಪ್ ಅವರ ಜೊತೆ ನಟಿಸುವುದರಿಂದ ಪ್ಲಸ್ ಆಗುತ್ತೆ ಎಂದು ಹೇಳಿಕೊಂಡಿದ್ದಾರೆ ಆಕಾಂಕ್ಷಾ.