ಅಕ್ಕಿನೇನಿ ನಾಗಾರ್ಜುನ ಮತ್ತು ರಾಮ್‍ಗೋಪಾಲ್ ವರ್ಮಾ ಮತ್ತೊಮ್ಮೆ ಒಂದಾಗಿದ್ದಾರೆ. ತೆಲುಗಿನಲ್ಲಿ ನಾಗಾರ್ಜುನಗೆ ಸ್ಟಾರ್ ಪಟ್ಟ ಕೊಟ್ಟ ಡೈರೆಕ್ಟರ್ ರಾಮ್‍ಗೋಪಾಲ್ ವರ್ಮಾ. ಈಗ ನಾಗಾರ್ಜುನ ಆಫೀಸರ್ ಅನ್ನೋ ಸಿನಿಮಾ ಮಾಡುತ್ತಿದ್ದಾರೆ. ಡೈರೆಕ್ಟರ್ ವರ್ಮಾ. ವಿಷಯ ಅದಲ್ಲ. ಈ ಸಿನಿಮಾದ ಕಥೆ ಕರ್ನಾಟಕದ ಐಪಿಎಸ್ ಆಫೀಸರ್ ಪ್ರಸನ್ನ ಎಂಬುವವರದ್ದು.
ಈ ಪ್ರಸನ್ನ ಅನ್ನೋ ಅಧಿಕಾರಿ ಕರ್ನಾಟಕದ ಎಸ್‍ಐಟಿಯಲ್ಲಿ ಆಫೀಸರ್ ಆಗಿದ್ದವರು. 2010ರಲ್ಲಿ ಪ್ರಸನ್ನ, ವರ್ಮಾ ಜೊತೆ ಹಂಚಿಕೊಂಡ ವೈಯಕ್ತಿಕ ಅನುಭವವನ್ನೇ ಸಿನಿಮಾ ಮಾಡಿದ್ದಾರೆ ವರ್ಮಾ. ಹಾಗಾದರೆ, ಇದು ಕರ್ನಾಟಕದ ಯಾವುದೋ ಹಗರಣದ ಕಥೆ ಎಂದುಕೊಳ್ಳಬೇಡಿ. ಪ್ರಸನ್ನ ಅನ್ನೋ ಕನ್ನಡಿಗ ಅಧಿಕಾರಿ ಮುಂಬೈ ಎಸ್‍ಐಟಿಯಲ್ಲಿದ್ದವರು. ಸಹಜವಾಗಿಯೇ ಅದು ಮುಂಬೈ ಭೂಗತ ಲೋಕದ ರಕ್ತಸಿಕ್ತ ಕಥೆಯನ್ನೇ ಹೊಂದಿದೆ.