ರಾಜ ಲವ್ಸ್ ರಾಧೆ ಚಿತ್ರ ನಾಳೆ ರಿಲೀಸ್ ಆಗಬೇಕಿತ್ತು. ವಿಜಯ್ ರಾಘವೇಂದ್ರ ಮತ್ತು ರಾಧಿಕಾ ಅಭಿನಯದ ಸಿನಿಮಾ ಈಗ ಮುಂದಿನ ವಾರಕ್ಕೆ ಹೋಗಿದೆ. ಅದಕ್ಕೆ ಕಾರಣ, ಶರಣ್ ಅಭಿನಯದ ರ್ಯಾಂಬೋ2 ಸಿನಿಮಾ.
ಕನ್ನಡ ಚಿತ್ರವೊಂದಕ್ಕೆ ಕನ್ನಡ ಸಿನಿಮಾವೇ ಪೈಪೋಟಿ ನೀಡುವುದು ಸರಿಯಲ್ಲ ಮತ್ತು ಥಿಯೇಟರ್ಗಳ ಸಮಸ್ಯೆಯಿಂದಾಗಿ ಮುಂದಿನ ವಾರಕ್ಕೆ ಹೋಗಿದ್ದಾಗಿ ನಿರ್ದೇಶಕ ರಾಜಶೇಖರ್ ಹೇಳಿಕೊಂಡಿದ್ದಾರೆ. ರ್ಯಾಂಬೋ2 ಸಿನಿಮಾ 200+ ಥಿಯೇಟರುಗಳಲ್ಲಿ ಬರುತ್ತಿದೆ. ನಮಗೂ 100+ ಥಿಯೇಟರುಗಳು ಬೇಕು. ಹೀಗಾಗಿ ಒಳ್ಳೆಯ ಚಿತ್ರಮಂದಿರಗಳು ಸಿಗೋದಿಲ್ಲ. ಪೈಪೋಟಿಗೆ ಬಿದ್ದು ರಿಲೀಸ್ ಮಾಡಿದ್ರೆ ಯಾರಿಗೂ ಉಪಯೋಗವಿಲ್ಲ. ಹೀಗಾಗಿ ಮುಂದಿನ ವಾರ ಬರಲು ನಿರ್ಧರಿಸಿದ್ದೇವೆ ಎಂದಿದ್ದಾರೆ ರಾಜಶೇಖರ್.
ಹೆಚ್ಎಲ್ಎನ್ ರಾಜು ನಿರ್ಮಾಣದ ರಾಜ ಲವ್ಸ್ ರಾಧೆ ಸಿನಿಮಾದಲ್ಲಿ ಕಾಮಿಡಿ ಲವ್ ಸ್ಟೋರಿಯೇ ಹೈಲೈಟ್.