` ಆಲ್ ಇಂಡಿಯಾ ರೋಡಲ್ಲಿ ರ್ಯಾಂಬೋ-2 ಸರ್ಕಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
rambo 2 all india jounery
Rambo 2 Movie Image

Rambo- 2. ಇದು ಕಾಮಿಡಿ  ಥ್ರಿಲ್ಲರ್. ಜರ್ನಿಯಲ್ಲೇ ಸಾಗುವ ಕಥೆ. ಈ ಚಿತ್ರಕ್ಕಾಗಿ ಇಡೀ ಚಿತ್ರತಂಡ ಇಡೀ ಭಾರತವನ್ನು ರೌಂಡ್ ಹೊಡೆದಿದೆ. ಒಂಥರಾ ಲಾರಿ, ಕಾರುಗಳ ಮೇಲೆ ಆಲ್ ಇಂಡಿಯಾ ಪರ್ಮಿಟ್ ಅನ್ನೋ ಬೋರ್ಡ್ ಇರುತ್ತಲ್ಲಾ.. ಆ ಥರ.. ಹೀಗಾಗಿ ಸಿನಿಮಾ ಟೀಂ, ಕರ್ನಾಟಕ, ಜೋಧ್‍ಪುರ ಕಡೆಗೆಲ್ಲ ಹೋಗಿದೆ. ಆದರೆ, ಸಿನಿಮಾದಲ್ಲಿ ಕಥೆ ನಡೆಯೋದು ಉತ್ತರ ಕರ್ನಾಟಕ ಮತ್ತು ಗೋವಾ ಮಧ್ಯೆ ಜರ್ನಿಯಲ್ಲಿ. ಹಾಗಾದರೆ, ರಾಜಸ್ಥನಕ್ಕೆ ಹೋಗೋ ಅಗತ್ಯ ಏನಿತ್ತು ಅಂತೀರಾ..?

ಸಿನಿಮಾ ಶೂಟಿಂಗ್ ವೇಳೆ ಕರ್ನಾಟಕದಲ್ಲಿ ಮಳೆಯೋ ಮಳೆ.. ಹಸಿರು ತುಂಬಿತ್ತು. ಹೀಗಾಗಿ ಕರ್ನಾಟಕದ ವಾತಾವರಣ ಹೋಲುವ ರಾಜಸ್ಥಾನದ ಪ್ರದೇಶಗಳಲ್ಲಿ ಶೂಟಿಂಗ್ ಮಾಡಲಾಯ್ತು. ಇನ್ನು ಕಥೆಯಲ್ಲಿ ಬರುವ ರಸ್ತೆಯ ಫಲಕಗಳನ್ನು ಕನ್ನಡದಲ್ಲಿ ಕಾಣುವಂತೆ ಮಾಡಲು ಅದೇನೇನು ಸರ್ಕಸ್ ಮಾಡಿದ್ದಾರೋ.. ನಿರ್ದೇಶಕ ಅನಿಲ್ ಚಿತ್ರೀಕರಣದ ರಸಘಳಿಗೆಗಳನ್ನು ಹೇಳಿಕೊಳ್ತಾರೆ.

ನಾವು ಶೂಟಿಂಗ್‍ಗೆ ಪ್ಲಾನ್ ಮಾಡಿದ್ದು ಉತ್ತರ ಕರ್ನಾಟಕದಲ್ಲಿ. ಆದರೆ, ಶೂಟಿಂಗ್ ಶುರುವಾಗುವ ಹೊತ್ತಿಗೆ ಇಡೀ ಪ್ರದೇಶ ಹಸಿರೋ ಹಸಿರು. ಹೀಗಾಗಿ ರಾಜಸ್ಥಾನ ಹುಡುಕಿಕೊಂಡೆವು. ಗೋವಾದ ದೃಶ್ಯಗಳನ್ನೂ ಅಷ್ಟೆ.. ಕೆಲವು ಸೀನ್‍ಗಳನ್ನು ಗೋವಾ ಹೋಲುವ ರಾಮೇಶ್ವರಂನಲ್ಲಿ ಶೂಟ್ ಮಾಡಲಾಗಿದೆ. ಆದರೆ, ಇದು ಪ್ರೇಕ್ಷಕರಿಗೆ ಗೊತ್ತಾಗಲ್ಲ. ಎಷ್ಟರಮಟ್ಟಿಗೆ ಅಂದ್ರೆ, ರಸ್ತೆಯಲ್ಲಿ ಬರುವ ಫಲಕಗಳನ್ನೂ ಕೂಡಾ ನಾವು ಕನ್ನಡಮಯವಾಗಿಸಿದ್ದೇವೆ. ಹೀಗಾಗಿ ಯಾವುದು ಉತ್ತರ ಕರ್ನಾಟಕ.. ಯಾವುದು ರಾಜಸ್ಥಾನ.. ಎನ್ನುವುದು ಪ್ರೇಕ್ಷಕರಿಗೆ ಗೊತ್ತಾಗಲ್ಲ. ಜೋಧ್‍ಪುರ್, ಜೈಸಲ್ಮೇರ್, ಭಾರತ ಪಾಕಿಸ್ತಾನ ಗಡಿ ಪ್ರದೇಶದಲ್ಲೂ ಶೂಟಿಂಗ್ ಆಗಿದೆ ಎಂದು ಶೂಟಿಂಗ್ ಕಥೆ ಬಿಚ್ಚಿಟ್ಟಿದ್ದಾರೆ ನಿರ್ದೇಶಕ ಅನಿಲ್.

ಶರಣ್ ಜೊತೆ ಅಶಿಕಾ ರಂಗನಾಥ್ ಜೋಡಿಯಾಗಿದ್ದರೆ, ಚಿಕ್ಕಣ್ಣ ಕಾಂಬಿನೇಷನ್ ಕೂಡಾ ಸಿನಿಮಾದಲ್ಲಿದೆ. ನಾಳೆಯೇ ಸಿನಿಮಾ ರಿಲೀಸ್. ತರುಣ್ ಸುಧೀರ್ ಸಾರಥ್ಯದಲ್ಲಿ ತಂತ್ರಜ್ಞರು ಮತ್ತು ಕಲಾವಿದರು ಒಗ್ಗೂಡಿ ನಿರ್ಮಿಸಿರುವ ಸಿನಿಮಾ ಇದು.