ಸುಮನ್ ರಂಗನಾಥ್, ವಯಸ್ಸು 43. ಆದರೆ, 20+ ಎನ್ನಿಸುವಂತಾ ಚೆಲುವೆ. ಈ ಚೆಲುವೆಯ ಮೇಲೆ ಕಾಮಿಡಿ ಸ್ಟಾರ್ ಚಿಕ್ಕಣ್ಣಂಗೆ ಲವ್ವಾಗಿದೆ. ಅದು ಡಬಲ್ ಎಂಜಿನ್ ಚಿತ್ರದಲ್ಲಿ.
ವಾಸ್ತವದಲ್ಲಿ ಚಿಕ್ಕಣ್ಣ, ಸುಮನ್ ರಂಗನಾಥ್ ಅವರ ಅಭಿಮಾನಿ. ಅವರ ಸಿನಿಮಾ ನೋಡಿದ್ದೆ. ನೋಡೋಕೆ ಚೆನ್ನಾಗಿದ್ರು. ಹೀಗಾಗಿಯೇ ಚಿಕ್ಕಂದಿನಲ್ಲೇ ಅವರ ಮೇಲೆ ಒಂಥರಾ ಪ್ರೀತಿ ಬೆಳೆದಿತ್ತು. ನಾವೆಲ್ಲಿ..? ಅವರೆಲ್ಲಿ..? ಆದರೆ, ಈಗ ಕನಸೊಂದು ನಿಜವಾಗಿದೆ ಎಂದು ಹೇಳಿಕೊಂಡಿದ್ದಾರೆ ಚಿಕ್ಕಣ್ಣ.
ಆರಂಭದಲ್ಲಿ ಸುಮನ್ ಅವರ ಎದುರು ನಟಿಸೋದು ಕಷ್ಟವಾಯಿತಂತೆ. ನಂತರ ಸುಮನ್ ಅವರೇ ಚಿಕ್ಕಣ್ಣನವರಿಗೆ ಧೈರ್ಯ ಹೇಳಿದ್ರಂತೆ. ತಮ್ಮ ಮೆಚ್ಚಿನ ನಟಿಯೊಂದಿಗೆ ನಟಿಸೋದು ಒಂದು ಅದ್ಭುತ ಅನುಭವ ಎಂದು ಹೇಳಿಕೊಂಡಿದ್ದಾರೆ ಚಿಕ್ಕಣ್ಣ.
ಅರುಣ್ ಕುಮಾರ್, ಶ್ರೀಕಾಂತ್ ನಿರ್ಮಾಣದ ಡಬಲ್ ಎಂಜಿನ್ ಚಿತ್ರಕ್ಕೆ ಚಂದ್ರಮೋಹನ್ ನಿರ್ದೇಶನವಿದೆ.