ಈ ಬಾರಿಯ ಎಲೆಕ್ಷನ್ ಚಿತ್ರರಂಗಕ್ಕೆ ಕೊಟ್ಟಿರುವುದು ಸಿಹಿಕಹಿಯ ಮಿಶ್ರಣ. ಕುತೂಹಲ ಮೂಡಿಸಿದ್ದ ಎಲೆಕ್ಷನ್‍ನ್ನು ಸಿನಿತಾರೆಯರ ಎಂಟ್ರಿ ಇನ್ನಷ್ಟು ರಂಗೇರಿಸಿತ್ತು. ಹೀಗೆ ರಂಗೇರಿದ್ದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ತಾರೆಯರಲ್ಲಿ ಗೆದ್ದವರು ಇಬ್ಬರು ಮಾತ್ರ.
ಹಿರೇಕರೂರು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕೌರವ ಬಿ.ಸಿ.ಪಾಟೀಲ್, ಕಳೆದ ಬಾರಿ ಸೋತಿದ್ದರು. ಈ ಬಾರಿ
ಸಿನಿಮಾದಿಂದ ಹೋದವರಲ್ಲಿ ದಲ್ಲಿ ಗೆದ್ದಿದ್ದಾರೆ. ಗೆಲುವಿನ ಅಂತರ 555 ಮತಗಳು.
ಇನ್ನು ಸೊರಬದಲ್ಲಿ ಗೆದ್ದಿರುವುದು ಕುಮಾರ್ ಬಂಗಾರಪ್ಪ. ಕಳೆದ ವರ್ಷ ಚಕ್ರವರ್ತಿ ಮೂಲಕ ಮತ್ತೊಮ್ಮೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದ ಕುಮಾರ್ ಬಂಗಾರಪ್ಪ, ಈ ಬಾರಿ ಗೆದ್ದಿದ್ದಾರೆ. ಕುಮಾರ್ ಬಂಗಾರಪ್ಪ ಗೆದ್ದಿರುವುದು ತಮ್ಮ ಸೋದರ ಮಧು ಬಂಗಾರಪ್ಪ ವಿರುದ್ಧ.
ಉಳಿದಂತೆ ಸಚಿವೆಯಾಗಿದ್ದ ಉಮಾಶ್ರೀ ಸೋತಿದ್ದಾರೆ. 20,888 ಮತಗಳ ಅಂತರದಿಂದ ಸೋತಿದ್ದಾರೆ. ಸಚಿವೆಯಾಗಿದ್ದರೂ ಕ್ಷೇತ್ರಕ್ಕೆ ಕೆಲಸ ಮಾಡಿಲ್ಲ ಎನ್ನುವ ಆಕ್ರೋಶ ಸೋಲಿಗೆ ಕಾರಣವಾಗಿದೆ. ಇನ್ನು ಸಿ.ಪಿ.ಯೋಗೇಶ್ವರ್ ಕುಮಾರಸ್ವಾಮಿ ವಿರುದ್ಧ ಸೋತಿದ್ದಾರೆ.
ಯಶವಂತಪುರಕ್ಕೆ ಕೊನೆಯ ಕ್ಷಣದಲ್ಲಿ ಎಂಟ್ರಿ ಕೊಟ್ಟಿದ್ದ ಜಗ್ಗೇಶ್ ಅವರಿಗೆ ಗೆಲುವು ಸಿಕ್ಕಿಲ್ಲ. ಕ್ಷೇತ್ರದಲ್ಲಿ ಬಿಜೆಪಿಯ ಮತಗಳಿಕೆ ಹೆಚ್ಚಿಸಿದ ಸಾಧನೆ ಜಗ್ಗೇಶ್ ಅವರದ್ದು. ಶಶಿಕುಮಾರ್ ಠೇವಣಿ ಕಳೆದುಕೊಂಡಿದ್ದರೆ, ಸಾಯಿಕುಮಾರ್ ಬಾಗೇಪಲ್ಲಿಯಲ್ಲಿ ಸೋತಿದ್ದಾರೆ.
ಇನ್ನು ಇನ್ನೇನು ಸಿಎಂ ಆಗುವುದು ಖಚಿತ ಎಂಬಂತಿರುವ ಹೆಚ್.ಡಿ.ಕುಮಾರಸ್ವಾಮಿ ಚಿತ್ರರಂಗದ ನಂಟು ಹೊಂದಿರುವವರೇ. ಚಿತ್ರ ನಿರ್ಮಾಪಕರಾಗಿ, ವಿತರಕರಾಗಿ ಸದಭಿರುಚಿಯ ಚಿತ್ರಗಳನ್ನು ಕೊಟ್ಟಿರುವವರೇ. ಹೀಗಾಗಿ ಚಿತ್ರರಂಗ ಈ ಬಾರಿಯೂ ಸಂಭ್ರಮಿಸೋಕೆ ಕಾರಣಗಳಿವೆ.