ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರಕ್ಕೆ ಸುನಿಲ್ ಶೆಟ್ಟಿ ಆಯ್ಕೆಯಾಗಿದ್ದಾರೆ. ನಟಿಸುವುದು ಪಕ್ಕಾ. ಆದರೆ, ಸುನಿಲ್ ಶೆಟ್ಟಿ ಪಾತ್ರ ಏನು ಅನ್ನೋದ್ರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ.
ಸುನಿಲ್ ಶೆಟ್ಟಿ ನಟಿಸೋಕೆ ಒಪ್ಪಿದ್ದಾರೆ. ಪಾತ್ರ ಇನ್ನಷ್ಟೇ ಫೈನಲೈಸ್ ಆಗಬೇಕು ಎಂದಿದ್ದಾರೆ ನಿರ್ದೇಶಕ ಕೃಷ್ಣ. ಸುನಿಲ್ ಶೆಟ್ಟಿ ಸರ್ ಬರುತ್ತಿರುವುದೇ ನನಗೊಂದು ಎಕ್ಸೈಟ್‍ಮೆಂಟ್ ಎಂದಿದ್ದಾರೆ ಸುದೀಪ್.
ಸುನಿಲ್ ಶೆಟ್ಟಿ, ಕನ್ನಡ ಚಿತ್ರರಂಗಕ್ಕೆ ಬರುತ್ತಿರುವುದಕ್ಕೆ ಮೂಲ ಕಾರಣ, ಸುದೀಪ್ ಮತ್ತು ಸುನಿಲ್ ಶೆಟ್ಟಿ ನಡುವೆ ಇರುವ ಸ್ನೇಹ. ಸೆಲಬ್ರಿಟಿ ಕ್ರಿಕೆಟ್ ಲೀಗ್‍ನಿಂದ ಶುರುವಾದ ಸ್ನೇಹ ನಿರಂತರವಾಗಿ ಮುಂದುವರೆಯುತ್ತಿದೆ. ಆ ಸ್ನೇಹವೇ ಸುನಿಲ್ ಶೆಟ್ಟಿಯವರನ್ನು ಕನ್ನಡ ಚಿತ್ರರಂಗದತ್ತ ಕರೆತಂದಿದೆ. ಪೈಲ್ವಾನ್ ಚಿತ್ರದ ಚಿತ್ರೀಕರಣ ಮೇ 17ರಿಂದ ಶುರುವಾಗಲಿದೆ.
Related Articles :-