ಚಾಲೆಂಜಿಂಗ್ ಸ್ಟಾರ್ ದರ್ಶನ್, ತಮ್ಮ ಎಡಗೈಗೆ ಪೆಟ್ಟು ಮಾಡಿಕೊಂಡಿದ್ದಾರೆ. ಯಜಮಾನ ಚಿತ್ರದ ಶೂಟಿಂಗ್ ವೇಳೆ ದರ್ಶನ್ ಎಡಗೈಗೆ ಪೆಟ್ಟಾಗಿದೆ. ಚಿಕ್ಕಮಗಳೂರಿನಲ್ಲಿ ಚಿತ್ರೀಕರಿಸಲಾಗುತ್ತಿದ್ದ ಸಾಹಸ ದೃಶ್ಯವೊಂದರಲ್ಲಿ ನಿರ್ದೇಶಕರು ಸ್ಪೆಷಲ್ ಕಂಪೋಸಿಂಗ್ ಮಾಡಿದ್ದರಂತೆ. ಆ ಸಾಹಸ ದೃಶ್ಯದ ಚಿತ್ರೀಕರಣದಲ್ಲಿ ದರ್ಶನ್ ಎಡಗೈಗೆ ಪೆಟ್ಟಾಗಿದೆ. ಬ್ಯಾಂಡೇಜ್ ಬಿದ್ದಿದೆ. ಸದ್ಯಕ್ಕೆ ಮೂರು ದಿನ ವಿಶ್ರಾಂತಿಯಲ್ಲಿದ್ದಾರೆ ದರ್ಶನ್.
ದರ್ಶನ್‍ಗೆ ಶೂಟಿಂಗ್ ವೇಳೆ ಗಾಯವಾಗೋದು ಹೊಸದೇನೂ ಅಲ್ಲ. ಸಾರಥಿ ಚಿತ್ರದ ಶೂಟಿಂಗ್ ವೇಳೆ ಕುದುರೆಯಿಂದ ಬಿದ್ದಿದ್ದ ದರ್ಶನ್, ವಿರಾಟ್ ಚಿತ್ರದಲ್ಲೂ ಗಾಯ ಮಾಡಿಕೊಂಡಿದ್ದರು. ಸದ್ಯಕ್ಕಂತೂ ದರ್ಶನ್ ಸರಿಹೋಗುವವರೆಗೆ ಚಿತ್ರೀಕರಣದಲ್ಲಿ ಭಾಗವಹಿಸೋದಿಲ್ಲ. ವಿಶ್ರಾಂತಿ ಪಡೆಯಲಿದ್ದಾರೆ.