ಕಿಚ್ಚ ಸುದೀಪ್ ಅಲ್ಲಲ್ಲ ಪೈಲ್ವಾನ್ ಸುದೀಪ್‍ಗೆ ತಕ್ಕ ಜೋಡಿ ಕೊನೆಗೂ ಸಿಕ್ಕಾಗಿದೆ. ರಾಜಸ್ಥಾನ ಮೂಲದ ಆಕಾಂಕ್ಷಾ ಸಿಂಗ್ ಎಂಬ ಸುಂದರಿ, ಕಿಚ್ಚನಿಗೆ ಜೊತೆಗಾತಿಯಾಗಿದ್ದಾರೆ. ಮುಂಬೈನಲ್ಲಿ ನೆಲೆಸಿರುವ ಆಕಾಂಕ್ಷಾ ವೃತ್ತಿಯಲ್ಲಿ ಮಾಡೆಲ್. ಈಗಾಗಲೇ ಕೆಲವು ಹಿಂದಿ ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಪೈಲ್ವಾನ್ ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ.
ಹಿಂದಿಯಲ್ಲಿ ಬದ್ರಿನಾಥ್ ಕಿ ದುಲ್ಹನಿಯಾ ಚಿತ್ರದಲ್ಲಿ ಅಲಿಯಾ ಭಟ್ ಗೆಳತಿಯಾಗಿ, ತೆಲುಗಿನ ಮಳ್ಳಿರಾವ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಹಿಂದಿಯಲ್ಲಿ ನಾ ಬೋಲೇ ತುಮ್ ನ ಮೈನೇ ಕುಚ್ ಕಹಾ ಧಾರಾವಾಹಿ ಮೂಲಕ ತೆರೆಗೆ ಬಂದ ಆಕಾಂಕ್ಷಾ ಕೆಲವು ರಿಯಾಲಿಟಿ ಶೋಗಳಲ್ಲೂ ಮಿಂಚಿದ್ದಾರೆ. ಈಗ ಪೈಲ್ವಾನನಿಗೆ ಜೊತೆಯಾಗಲು ಕನ್ನಡಕ್ಕೆ ಬರುತ್ತಿದ್ದಾರೆ.
ಆಕಾಂಕ್ಷಾ ಅವರನ್ನು ಅಡಿಷನ್ ಮೂಲಕ ಆಯ್ಕೆ ಮಾಡಿದ್ದೇವೆ. ನಮ್ಮ ಚಿತ್ರದ ಪಾತ್ರಕ್ಕೆ ಹೊಂದಿಕೆಯಾಗುತ್ತಾರೆ ಎಂಬ ನಂಬಿಕೆ ನಮಗಿದೆ ಎಂದು ತಿಳಿಸಿದ್ದಾರೆ ನಿರ್ದೇಶಕ ಕೃಷ್ಣ.