` ಬಿಟ್‍ಹೋಗ್ಬೇಡ.. ಹಾಡು ಹಿಟ್ ಮಾಡಿದ್ದು ಅಂಧ ಗಾಯಕ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
blind singer mehaboob
Mehaboob Saab

ರ್ಯಾಂಬೋ 2 ಚಿತ್ರ ಇದೇ ವಾರ ರಿಲೀಸ್ ಆಗುತ್ತಿದೆ. ಚಿತ್ರದ ಹೀರೋ ಶರಣ್. ಚಿತ್ರದ ಸೆಕೆಂಡ್ ಹೀರೋ ಹಾಡುಗಳು. ಅಷ್ಟರಮಟ್ಟಿಗೆ ಹಾಡುಗಳು ಆನ್‍ಲೈನ್‍ನಲ್ಲಿ ಹಿಟ್ ಆಗಿವೆ. ಅವುಗಳಲ್ಲಿ ಒಂದು ಬಿಟ್‍ಹೋಗ್ಬೇಡಾ ಅನ್ನೋ ಹಾಡು. ಅದೊಂದು ಫೀಲಿಂಗ್ ಸಾಂಗು.

ವಿಷಾದವನ್ನೇ ಮೈವೆತ್ತಿಕೊಂಡಿರುವ ಹಾಡು ಭಾವುಕಜೀವಿಗಳ ಮನಸ್ಸು ಗೆದ್ದಿದೆ. ಅಂದ ಹಾಗೆ ಈ ಹಾಡು ಹಾಡಿರುವುದು ಮೆಹಬೂಬ್. ಕಣ್ಣು ಕಾಣದ ಅಂಧ ಮೆಹಬೂಬ್ ಸಾಬ್. ರಿಯಾಲಿಟಿ ಶೋನಲ್ಲಿ ಮೆಚ್ಚುಗೆ ಗಳಿಸಿದ್ದ ಮೆಹಬೂಬ್‍ಗೆ ಹಾಡುವ ಅವಕಾಶ ಕೊಟ್ಟವರು ಅರ್ಜುನ್ ಜನ್ಯಾ.

ಹಾಡನ್ನು ಮೆಹಬೂಬ್ ಎಷ್ಟು ಅದ್ಭುತವಾಗಿ ಹಾಡಿದರು ಎಂದರೆ, ಕೊನೆಗೆ ಸಿನಿಮಾದಲ್ಲಿ ಅದೇ ಹಾಡನ್ನು ಉಳಿಸಿಕೊಳ್ಳಲು ನಿರ್ಧರಿಸಿದೆವು. ಹಾಡು ಹಿಟ್ ಆಗಿದೆ. ಅವರ ಕಂಠಕ್ಕೆ ಚಿತ್ರರಸಿಕರು ಮನಸೋತಿದ್ದಾರೆ. ಅಂದಹಾಗೆ ಮೆಹಬೂಬ್ ಸಾಬ್, ದಾವಣಗೆರೆಯ ಕುಂದಗೋಳದವರು. ಶಾಸ್ತ್ರೀಯ ಸಂಗೀತದ ಅಭ್ಯಾಸ ಮಾಡಿದ್ದು ಪುಟ್ಟರಾಜ ಗವಾಯಿಗಳ ಆಶ್ರಮದ ಶಾಖಾ ಮಠದಲ್ಲಿ.

 

Yajamana Movie Gallery

Bazaar Movie Gallery