ಹುಚ್ಚ ವೆಂಕಟ್ ಗಿಮಿಕ್ ಮಾಡೋದ್ರಲ್ಲಿ ಫೇಮಸ್. ಇತ್ತೀಚೆಗೆ ವೆಂಕಟ್, ತಾವು ತಮ್ಮ ಚಿತ್ರದ ನಾಯಕಿ ಐಶ್ವರ್ಯಾ ಅವರನ್ನು ಮದುವೆಯಾಗಿರೋದಾಗಿ ಹೇಳಿಕೊಂಡಿದ್ದರು. ಆದರೆ, ನಮ್ಮ ಅಪ್ಪ-ಅಮ್ಮನಿಗೆ ಹೇಳಬೇಡಿ ಎಂದು ಮನವಿ ಮಾಡಿದ್ದ ಅವರ ಮಾತಿನ ಬಗ್ಗೆ ಅನುಮಾನ ಇದ್ದೇ ಇತ್ತು. ಕೊನೆಗೂ ಅದು ಹುಚ್ಚ ವೆಂಕಟ್‍ನ ಪಬ್ಲಿಸಿಟಿ ಗಿಮಿಕ್ ಅನ್ನೋದು ಋಜುವಾತಾಗಿದೆ. ಏಕೆಂದರೆ, ಅದು ಹುಚ್ಚ ವೆಂಕಟ್‍ನ ಹೊಸ ಸಿನಿಮಾದ ದೃಶ್ಯವಂತೆ. ಅದನ್ನೇ ರಿಯಲ್ ಮದುವೆ ಅನ್ನೋ ರೀತಿ ತೋರಿಸಿ ಜನರನ್ನು ಬಕರಾ ಮಾಡಲು ಯತ್ನಿಸಿದ್ದಾನೆ ಹುಚ್ಚ ವೆಂಕಟ್.
ನಾನು ಒಬ್ಬನೇ, ನಾನು ಯಾವತ್ತಿಗೂ ಸಿಂಗಲ್ ಎಂದಿರುವ ಹುಚ್ಚ ವೆಂಕಟ್, ಐಶ್ವರ್ಯಾ ಹೇಳಿದ್ದಕ್ಕೇ ಈ ರೀತಿ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ.
Related Articles :-