ಕನ್ನಡ ಚಿತ್ರರಂಗದ ಬಹುತೇಕ ಸ್ಟಾರ್‍ಗಳು ಈಗಾಗಲೇ ಬೆರಳಿಗೆ ಇಂಕಿನ ಗುರುತು ಹಾಕಿಸಿಕೊಂಡು ಸಂಭ್ರಮಿಸಿದ್ದಾರೆ. ಪ್ರಚಾರದ ರಾಯಭಾರಿಯಾಗಿದ್ದ ಯೋಗರಾಜ್ ಭಟ್, ಪ್ರಣೀತಾ ಸೇರಿದಂತೆ ಚಿತ್ರರಂಗದ ಎಲ್ಲ ಸ್ಟಾರ್‍ಗಳೂ ವೋಟ್ ಹಾಕಿದ್ದಾರೆ. ಕುಟುಂಬ ಸಮೇತರಾಗಿ ವೋಟ್ ಮಾಡಿ ಜಾಗೃತಿ ಸಂದೇಶ ಸಾರಿದ್ದಾರೆ. ಆದರೆ, ಇಷ್ಟೆಲ್ಲ ಆದರೂ ಬೆಂಗಳೂರಿನ ಜನ ವೋಟ್ ಹಾಕೋಕೆ ಬರಲಿಲ್ಲ.
ವೋಟ್ ಇದ್ದವರು ವೋಟ್ ಹಾಕಿದ್ದರೆ, ಇನ್ನೂ ಕೆಲವು ಸ್ಟಾರ್‍ಗಳಿಗೆ ವೋಟ್ ಹಾಕೋ ಭಾಗ್ಯವೇ ಸಿಗಲಿಲ್ಲ. ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಪುತ್ರ ಆದಿತ್ಯ ಅವರ ಹೆಸರನ್ನು ಮತದಾರರ ಪಟ್ಟಿಯಿಂದಲೇ ತೆಗೆದುಬಿಟ್ಟಿದ್ದಾರಂತೆ. ಹೀಗಾಗಿ ಅವರು ಈ ಬಾರಿ ಮತಗಟ್ಟೆಯಿಂದ ದೂರವೇ ಉಳಿದರು.
ಇನ್ನು ಫಸ್ಟ್ ರ್ಯಾಂಕ್ ರಾಜು ಖ್ಯಾತಿಯ ಗುರುನಂದನ್ ಮತಗಟ್ಟೆಗೆ ಹೋದಾಗ ಶಾಕ್ ಕಾದಿತ್ತು. ಇವರ ಬಳಿ ವೋಟರ್ ಐಡಿ ಇದ್ದರೂ, ಮತದಾರರರ ಲಿಸ್ಟ್‍ನಲ್ಲಿ ಹೆಸರೇ ಇರಲಿಲ್ಲ. ಹೀಗಾಗಿ ಮತದಾನ ಮಾಡಲು ಆಗಲಿಲ್ಲ.
ಬಹುತೇಕ ಚಿತ್ರತಾರೆಯರ ವೋಟ್ ಬೆಂಗಳೂರಿನಲ್ಲೇ ಇತ್ತು. ಬಿಗ್‍ಬಾಸ್ ಪ್ರಥಮ್, ಬೆಂಗಳೂರಿನಲ್ಲೇ ಇದ್ದರೂ ವೋಟ್ ಇದ್ದದ್ದು ಕೊಳ್ಳೇಗಾಲದಲ್ಲಿ. ಮತದಾನದ ಹಕ್ಕು ಮಿಸ್ ಮಾಡದ ಪ್ರಥಮ್, ಬೆಳ್ಳಂಬೆಳಗ್ಗೆಯೇ ಕೊಳ್ಳೇಗಾಲಕ್ಕೆ ಹೋಗಿ ಮತದಾನ ಮಾಡಿದ್ದು ವಿಶೇಷ.