ರಮ್ಯಾ, ಸ್ಯಾಂಡಲ್‍ವುಡ್ ಕ್ವೀನ್ ಆಗಿದ್ದವರು. ಸಂಸದೆಯಾಗಿದ್ದವರು. ಈಗ ಕಾಂಗ್ರೆಸ್‍ನಲ್ಲಿ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ. ಮತದಾರರನ್ನು ಮತಗಟ್ಟೆಗೆ ಬಂದು ವೋಟ್ ಮಾಡಿ ಎಂದು ಹೇಳುವುದು ಆಯೋಗದ ಕೆಲಸವಷ್ಟೇ ಅಲ್ಲ, ರಾಜಕೀಯ ಪಕ್ಷಗಳ ಹೊಣೆಗಾರಿಕೆಯೂ ಹೌದು. ಆದರೆ, ಇಷ್ಟೆಲ್ಲ ಹೊಣೆಗಾರಿಕೆ ಇರುವ ರಮ್ಯಾ ಮತದಾನ ಮಾಡಲು ಬರಲೇ ಇಲ್ಲ.
ರಮ್ಯಾ ಅವರ ವೋಟ್ ಇರೋದು ಮಂಡ್ಯ ನಗರದ 10ನೇ ವಾರ್ಡ್‍ನಲ್ಲಿ. ಅಧಿಕೃತವಾಗಿ ಅವರು ವಿದ್ಯಾನಗರದ ನಿವಾಸಿ. ಅಲ್ಲಿ ಅವರ ಮನೆಯೂ ಇದೆ. ಲೋಕಸಭೆಗೆ ಸ್ಪರ್ಧಿಸಿದ್ದಾಗ ಬಂದು ಮತ ಹಾಕಿದ್ದೇ ಕೊನೆ, ರಮ್ಯಾ ನಂತರ ವೋಟ್ ಹಾಕೋಕೆ ಬಂದೇ ಇಲ್ಲ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಮತ ಹಾಕಲು ಬಾರದ ರಮ್ಯಾ, ಈ ಬಾರಿ ವಿಧಾನಸಭೆ ಚುನಾವಣೆಯಿಂದಲೂ ಮತದಾನ ಮಾಡದೆ ದೂರ ಉಳಿದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರಾಗಿರುವ ರಾಹುಲ್ ಗಾಂಧಿ, ಸಿಎಂ ಆಗಿರುವ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಮತದಾರರಿಗೆ ಪ್ರಜಾಪ್ರಭುತ್ವದ ಪವಿತ್ರ ಹಕ್ಕು ಚಲಾಯಿಸಿ ಎಂದು ಸಂದೇಶ ಕೊಟ್ಟರು. ಆದರೆ, ಆ ಸಂದೇಶವನ್ನು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ ರಮ್ಯಾ ಅವರೇ ವೋಟ್ ಹಾಕೋಕೆ ಬರಲಿಲ್ಲ.