ಶಿವರಾಜ್ಕುಮಾರ್ ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ.. ನಾಟ್ಯಸಾರ್ವಭೌಮ.. ಕರುನಾಡ ಚಕ್ರವರ್ತಿ..ಸೆಂಚುರಿ ಸ್ಟಾರ್.. ಇಂತಹ ಹಲವು ಬಿರುದಾಂಕಿರಾಗಿರುವ ಶಿವರಾಜ್ಕುಮಾರ್ ಅವರ ಯಶೋಗಾಥೆಯ ಪುಸ್ತಕ ಬರುತ್ತಿದೆ. ಪತ್ರಕರ್ತ, ಛಾಯಾಗ್ರಾಹಕರೂ ಆಗಿರುವ ಜನಾರ್ದನ ರಾವ್ ಸಾಳಂಕೆ, ಈ ಪುಸ್ತಕ ಬರೆದಿದ್ದಾರೆ. ಪುಸ್ತಕದ ಹೆಸರು ಕರುನಾಡ ಚಕ್ರವರ್ತಿ ಡಾ.ಶಿವರಾಜ್ಕುಮಾರ್ ಯಶೋಗಾಥೆ.
ಸಾಳಂಕೆ ಈ ಮುನ್ನ ಡಾ.ವಿಷ್ಣುವರ್ಧನ್ ಬಗ್ಗೆ 4 ಪುಸ್ತಕ ಬರೆದಿದ್ದಾರೆ. ಪುಸ್ತಕದ ಕುರಿತು ಮೊದಲು ವಿಷಯ ತಿಳಿಸಿದ್ದು ರಾಘವೇಂದ್ರ ರಾಜ್ಕುಮಾರ್ ಅವರಿಗಂತೆ. ನಿಮಗೆ ದೇವರು ಒಳ್ಳೆಯದು ಮಾಡಲಿ ಎಂದು ಖುಷಿಯಾಗಿ ಹಾರೈಸಿದ್ದರಂತೆ ರಾಘವೇಂದ್ರ ರಾಜ್ಕುಮಾರ್. ಶಿವರಾಜ್ಕುಮಾರ್ ಹುಟ್ಟುಹಬ್ಬಕ್ಕೆ ಮುನ್ನ ಪುಸ್ತಕ ಬಿಡುಗಡೆಯಾಗಲಿದೆ.