ನನ್ ಎಕ್ಕಡಾ.. ನನ್ ಮಗಂದ್.. ಖ್ಯಾತಿಯ ಹುಚ್ಚ ವೆಂಕಟ್ ಮತ್ತೊಮ್ಮೆ ಮದುವೆಯಾಗಿದ್ದಾರೆ. ಈ ಬಾರಿ ಅವರು ಮದುವೆಯಾಗಿರೋದು ತಮ್ಮದೇ ಚಿತ್ರದ ಹೀರೋಯಿನ್ ಜೊತೆ ಅನ್ನೋದು ವಿಶೇಷ. ಡಿಕ್ಟೇಟರ್ ಹುಚ್ಚ ವೆಂಕಟ್ ಅನ್ನೋ ಸಿನಿಮಾ ಮಾಡುತ್ತಿರುವ ವೆಂಕಟ್, ಅದೇ ಚಿತ್ರದ ನಾಯಕಿ ಐಶ್ವರ್ಯಾರನ್ನು ಮದುವೆಯಾಗಿದ್ದಾರೆ. ಅಂದಹಾಗೆ ಇದು ಹುಚ್ಚ ವೆಂಕಟ್‍ಗೆ ಎರಡನೇ ಮದುವೆ. ಈ ಮೊದಲು ರೇಷ್ಮಾ ಎಂಬುವವರನ್ನು ಮದುವೆಯಾಗಿದ್ದ ವೆಂಕಟ್, ನಂತರ ಅವರಿಂದ ದೂರವಾಗಿದ್ದರು.
ಮಡಿಕೇರಿಯಲ್ಲಿ ಮದುವೆಯಾಗಿರುವ ಹುಚ್ಚ ವೆಂಕಟ್, ಇನ್ನೂ ವಿಷಯವನ್ನು ಮನೆಯವರಿಗೆ ತಿಳಿಸಿಲ್ಲವಂತೆ!. ಫೇಸ್‍ಬುಕ್ ಲೈವ್‍ನಲ್ಲಿ ಇದೆಲ್ಲ ವಿಷಯವನ್ನು ಜಗತ್ತಿಗೇ ಹೇಳಿಕೊಂಡಿರುವ ಹುಚ್ಚ ವೆಂಕಟ್, ಮದುವೆ ವಿಷಯವನ್ನು ಮನೆಯವರಿಂದ ಮುಚ್ಚಿಟ್ಟಿದ್ದಾರಂತೆ. ಕಾರಣ, ಅವರ ದೊಡ್ಡಮ್ಮ ತೀರಿಹೋದ ಸುದ್ದಿ. ಹೀಗಾಗಿ ಹೇಳಿಲ್ಲ. ನಮ್ಮನ್ನು ದೂರ ಮಾಡಬೇಡಿ ಎಂದು ಬೇಡಿಕೊಂಡಿದ್ದಾರೆ ಹುಚ್ಚ ವೆಂಕಟ್.