ಅಮ್ಮ ಐ ಲವ್ ಯೂ ಚಿತ್ರತಂಡ ಅಮ್ಮಂದಿರ ದಿನಕ್ಕಾಗಿ ಒಂದು ಸ್ಪೆಷಲ್ ವಿಡಿಯೋ ಹಾಗೂ ಒಂದು ಹಾಡನ್ನು ರಿಲೀಸ್ ಮಾಡ್ತಾ ಇದೆ. ತಾಯಿಯ ಕುರಿತು ಇದ್ದ ಒಂದು ಕೊಟೇಷನ್ ಗಿರಿ ದ್ವಾರಕೀಶ್ ಮತ್ತು ಚೈತನ್ಯಗೆ ಇಷ್ಟವಾಗಿದೆ. ಅದನ್ನು ಕನ್ನಡಕ್ಕೆ ಅನುವಾದಿಸಿ ಚಿರು ಮುಂದಿಟ್ಟಾಗ ಚಿರು ಮತ್ತು ಧ್ರುವ ಒಟ್ಟಿಗೇ ಮಾಡುವ ಬಯಕೆ ತೋರಿಸಿದ್ರು. ಅದರಂತೆ ವಿಡಿಯೋ ಸಿದ್ಧವಾಯ್ತು. ಈಗ ಅಮ್ಮಂದಿರ ದಿನದ ಕೊಡುಗೆಯಾಗಿ ಬಂದಿದೆ. ಅಷ್ಟೇ ಅಲ್ಲ, ಚಿತ್ರದ ಒಂದು ಹಾಡಿನ ವಿಡಿಯೋವೊಂದನ್ನು ಬಿಡುಗಡೆ ಮಾಡಲಾಗುತ್ತಿದೆ.
ಇಷ್ಟಕ್ಕೂ ವಿಡಿಯೋದಲ್ಲಿ ಏನಿದೆ ಅಂತೀರಾ.. ತಾಯಿಯಿಂದ ಏನು ಬಯಸುತ್ತೇವೆ ಮತ್ತು ತಾಯಿಗೆ ಏನು ಕೊಡುತ್ತೇವೆ ಅನ್ನೋ ಸಂದೇಶ ವಿಡಿಯೋದಲ್ಲಿದೆ. ಅಷ್ಟೇ ಅಲ್ಲ, ತಂದೆಯಾಗಲು ಒಂದು ಕ್ಷಣ ಬೇಕು ಆದರೆ, ತಾಯಿಯಾಗಲು ಒಂದು ಜೀವನ ಬೇಕು ಅನ್ನೋದು ವಿಡಿಯೋ ಸಂದೇಶ. ಇದು ಅಮ್ಮಂದಿರ ದಿನಕ್ಕಾಗಿ ಅಮ್ಮ ಐ ಲವ್ ಯೂ ಚಿತ್ರತಂಡ ನೀಡುತ್ತಿರುವ ಕಾಣಿಕೆ.