ಶಿವರಾಜ್‍ಕುಮಾರ್ ಅವರಿಗೆ ರಾಜ್ಯಾದ್ಯಂತ ಅಭಿಮಾನಿಗಳಿದ್ದಾರೆ. ಅಭಿಮಾನಿ ಸಂಘಗಳಿವೆ. ಬೆಳಗಾವಿಯ ಸಿಂಹದ ಮರಿ ಡಾ.ಶಿವರಾಜ್‍ಕುಮಾರ್ ಅಭಿಮಾನಿ ಸಂಘವೂ ಅದರಲ್ಲಿ ಒಂದು. ಆ ಸಂಘದ ರೂವಾರಿಗಳು ಮಲ್ಲೇಶ್ ಪೂಜಾರಿ ಮತ್ತು ಶೇಖರ್ ಕಾಲೇರಿ. ಇವರಿಬ್ಬರೂ ಈಗ ಜೊತೆಗೂಡಿ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಸಿನಿಮಾ ಹೆಸರು ಅಮೋಘ್.
ಬಿ.ಸುರೇಶ್ ಅವರ ಬಳಿ ಸಹನಿರ್ದೇಶಕರಾಗಿದ್ದ ಚಂದೂರ ಮಾರುತಿ, ಈ ಸಿನಿಮಾಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿ ನಿರ್ದೇಶಕನ ಮಾಡುತ್ತಿದ್ದಾರೆ. ಅರುಣ್ ಮತ್ತು ಚೈತ್ರ ಚಿತ್ರದ ಪ್ರಧಾನ ಭೂಮಿಕೆಯಲ್ಲಿದ್ದಾರೆ.
ಅಭಿಮಾನಿಯ ಸಿನಿಮಾ ಸಾಹಸಕ್ಕೆ ಮುಖ್ಯ ಅತಿಥಿಯಾಗಿದ್ದವರು ಸ್ವತಃ ಶಿವರಾಜ್‍ಕುಮಾರ್. ರಾಚೇನಹಳ್ಳಿಯ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆದ ಸಿನಿಮಾ ಮುಹೂರ್ತಕ್ಕೆ ಆಗಮಿಸಿದ್ದ ಶಿವರಾಜ್‍ಕುಮಾರ್, ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಚಿತ್ರತಂಡಕ್ಕೆ ಶುಭ ಹಾರೈಸಿದರು.