` ಹೆಸರಷ್ಟೇ ರ್ಯಾಂಬೋ.. ಉಳಿದಂತೆ ಎಲ್ಲವೂ ಹೊಸದು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
this rambo is beyond differnt
Sharan, Ashika In Rambo 2

ಚುಟು ಚಟು ಅನ್ನಿಸುತ್ತಾ ತೆರೆಗೆ ರೆಡಿಯಾಗಿರುವ ಸಿನಿಮಾ ರ್ಯಾಂಬೋ 2. ಇದು ರ್ಯಾಂಬೋ ಚಿತ್ರದ ಮುಂದುವರಿದ ಭಾಗಾನಾ..? ಈ ಚಿತ್ರದಲ್ಲೂ ಹಂದಿ ಇರುತ್ತಾ..? ಹೀರೋ ಕಾರ್ ಬ್ರೋಕರ್ ಆಗಿರ್ತಾನಾ..? ಹೀಗೆ ಹಲವು ಪ್ರಶ್ನೆಗಳು ಮೂಡೋಕೆ ಕಾರಣ, ಚಿತ್ರದ ಟೈಟಲ್‍ನಲ್ಲೇ ರ್ಯಾಂಬೋ ಇರೋದು. ಆದರೆ, ಚಿತ್ರದ ಸಹನಿರ್ಮಾಪಕರೂ ಅಗಿರುವ ತರುಣ್ ಸುಧೀರ್ ಕ್ಲಿಯರ್ರಾಗಿ ಹೇಳಿಬಿಟ್ಟಿದ್ದಾರೆ. ಹೆಸರೊಂದು ಬಿಟ್ಟು, ಮಿಕ್ಕ ಎಲ್ಲವೂ ಹೊಸದು ಅಂತಾ.

ರ್ಯಾಂಬೋ 2 ಸಿನಿಮಾದಲ್ಲಿರೋದು ಕಾಮಿಡಿ ಥ್ರಿಲ್ಲರ್. ರೋಡ್ ಸಿನಿಮಾ. ಸಿನಿಮಾದ ಶೇ.80ರಷ್ಟು ಕಥೆ, ಜರ್ನಿಯಲ್ಲಿಯೇ ನಡೆಯುತ್ತೆ ಅಂತಾರೆ ತರುಣ್ ಸುಧೀರ್. ರ್ಯಾಂಬೋ ಸಿನಿಮಾ ಕೂಡಾ ಕಾಮಿಡಿ ಥ್ರಿಲ್ಲರ್ ಆಗಿತ್ತು. ಪ್ರೇಕ್ಷಕರನ್ನು ನಕ್ಕು ನಲಿಸಿತ್ತು. ಶರಣ್‍ರನ್ನು ಸ್ಟಾರ್ ಮಾಡಿತ್ತು. ಈಗ ಮತ್ತೊಮ್ಮೆ ಬರುತ್ತಿದೆ ರ್ಯಾಂಬೋ ಟೀಂ. ಶರಣ್‍ರನ್ನು ಸೂಪರ್‍ಸ್ಟಾರ್ ಮಾಡುತ್ತಾ..?