` ಅಶಿಕಾ ರಂಗನಾಥ್ ಚುಟುಚುಟು ಅಶಿಕಾ ಆಗಿಬಿಟ್ರು.. - chitraloka.com | Kannada Movie News, Reviews | Image

User Rating: 4 / 5

Star activeStar activeStar activeStar activeStar inactive
 
ashika ranganath's new title is chutu chutu
Rambo 2 Movie Image

ಅಶಿಕಾ ರಂಗನಾಥ್.. ಮುಗುಳುನಗೆ, ರಾಜು ಕನ್ನಡ ಮೀಡಿಯಂ ಮೊದಲಾದ ಚಿತ್ರಗಳಲ್ಲಿ ನಟಿಸಿರುವ ಚೆಲುವೆ. ಹೋಮ್ಲಿ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ಈ ಹುಡುಗಿಗೆ ಈಗ ಅಭಿಮಾನಿಗಳು ಹೊಸ ಬಿರುದು ಕೊಟ್ಟಿದ್ದಾರೆ. ಅಶಿಕಾ ಈಗ ಚುಟುಚುಟು ಅಶಿಕಾ ಆಗಿಬಿಟ್ಟಿದ್ದಾರೆ. ಆ ಬಿರುದು ಬಂದಿದ್ದು ರ್ಯಾಂಬೋ2 ಚಿತ್ರದ ಚುಟು ಚುಟು ಹಾಡಿನಿಂದ.

ಚುಟುಚುಟು ಅಂತೈತಿ ಅನ್ನೋ ಹಾಡಿಗೆ ಮೈಚಳಿ ಬಿಟ್ಟು ಹೆಜ್ಜೆ ಹಾಕಿರುವ ಅಶಿಕಾ, ಪ್ರೇಕ್ಷಕರನ್ನು ಹುಚ್ಚೆಬ್ಬಿಸಿರುವುದು ನಿಜ. ಚಿತ್ರದಲ್ಲಿ ಅದೊಂದೇ ಹಾಡಲ್ಲ, ಯವ್ವಾಯವ್ವಾ, ಬಿಟ್ಹೋಗ್ಬೇಡ ಹಾಡುಗಳೂ ಹಿಟ್ ಆಗಿವೆ. ಐಂದ್ರಿತಾ ಹೆಜ್ಜೆ ಹಾಕಿರುವ ಧಮ್ ಮಾರೋ ಧಮ್ ಕೂಡಾ ಸದ್ದು ಮಾಡ್ತಿದೆ. ಅರ್ಜುನ್ ಜನ್ಯಾ ಮತ್ತೊಮ್ಮೆ ಮ್ಯಾಜಿಕ್ ಮಾಡಿಬಿಟ್ಟಿದ್ದಾರೆ.

ಎಲ್ಲಿಯೇ ಹೋದ್ರೂ ನನ್ನನ್ನೀಗ ಚುಟುಚುಟು ಅಂತಾನೇ ಗುರುತಿಸ್ತಿದ್ದಾರೆ. ಅಷ್ಟರಮಟ್ಟಿಗೆ ಫೇಮಸ್ ಆಗಿಬಿಟ್ಟಿದ್ದೇನೆ ಅಂತಾರೆ ಚುಟುಚುಟು ಅಶಿಕಾ.

ಚಿತ್ರದಲ್ಲಿ ಅಶಿಕಾ ಅವರದ್ದು ಗ್ಲಾಮರ್ ರೋಲ್. ಗೋವಾದಲ್ಲಿ ನೆಲೆಸಿರುವ ಮಯೂರಿ ಅನ್ನೋ ಹುಡುಗಿಯ ಪಾತ್ರ. ಬೋಲ್ಡ್, ಗ್ಲಾಮರಸ್ ಹಾಗೂ ಅಟಿಟ್ಯೂಡ್ ಇರುವ ಹುಡುಗಿಯ ಪಾತ್ರ. ಅಭಿನಯಕ್ಕೆ ಸಿಕ್ಕಿರುವ ಅವಕಾಶವನ್ನು ಅಶಿಕಾ ಅದ್ಬುತವಾಗಿ ಬಳಸಿಕೊಂಡಿದ್ದಾರೆ ಅನ್ನೋ ಸರ್ಟಿಫಿಕೇಟ್ ಕೊಟ್ಟಿರೋದು ನಿರ್ದೇಶಕ ಅನಿಲ್.