` ನಂಜುಂಡನಿಲ್ಲದ ಎಡಕಲ್ಲು ಗುಡ್ಡ. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
edakallu guddadamele without nanjunda
Edakallu Guddadamele Movie Image

ಎಡಕಲ್ಲು ಗುಡ್ಡದ ಮೇಲೆ ಎಂದ ತಕ್ಷಣ ನೆನಪಾಗೋದು ನಂಜುಂಡ.. ಜಯಂತಿಯ ಜೊತೆ ಆತ ನಡೆಸುವ ಫ್ಲರ್ಟು.. ವಿರಹಾ.. ನೂರು ನೂರು ತರಹ.. ಅನ್ನೋ ಹಾಡು.. ಗೃಹಿಣಿಯಾಗಿ ದಾರಿ ತಪ್ಪುವ ಜಯಂತಿ, ಅಕ್ಕನ ಬದುಕನ್ನು ಸರಿ ಮಾಡಲು ಹಂಬಲಿಸುವ ಆರತಿ.. ಇದೆಲ್ಲ ಹಳೆಯ ಎಡಕಲ್ಲು ಗುಡ್ಡದ ಮೇಲೆ.. ಈಗ ಮತ್ತೆ ಬಂದಿದೆ. ಇದು ಹೊಸ ಎಡಕಲ್ಲು ಗುಡ್ಡದ ಮೇಲೆ.

ಟೈಟಲ್‍ವೊಂದನ್ನು ಬಿಟ್ಟರೆ, ಮಿಕ್ಕ ಯಾವುದರಲ್ಲೂ ಹಳೆಯ ಎಡಕಲ್ಲು ಗುಡ್ಡದ ಮೇಲೆ ಚಿತ್ರದೊಂದಿಗೆ ಸಂಬಂಧವಿಲ್ಲ. ಚಿತ್ರದಲ್ಲಿರೋದು ಮಕ್ಕಳ ಕಥೆ. ದೊಡ್ಡವರಿಗೆ ಅಂದರೆ ಹೆತ್ತವರಿಗೆ ಎಚ್ಚರಿಕೆಯ ಸಂದೇಶವೂ ಚಿತ್ರದಲ್ಲಿದೆ. ಮಕ್ಕಳಿಗೆ ಕೇಳಿದ್ದೆಲ್ಲ ಕೊಟ್ಟರೆ ಸಾಕು, ಚೆನ್ನಾಗಿರುತ್ತಾರೆ ಅನ್ನೋದು ಈಗಿನ ಕಾಲದ ಹೆತ್ತವರ ನಂಬಿಕೆಯಾಗಿದೆ. ಆದರೆ, ಮಕ್ಕಳಿಗೆ ಬೇಕಿರೋದು ವಸ್ತು, ಹಣವಷ್ಟೇ ಅಲ್ಲ ಅನ್ನೋದು ಚಿತ್ರದ ಸಂದೇಶ.

1973ರಲ್ಲಿ ಎಡಕಲ್ಲು ಗುಡ್ಡದ ಮೇಲೆ ಸಿನಿಮಾ ಟ್ರೆಂಡ್ ಸೃಷ್ಟಿಸಿತ್ತು. ಆಗಿನ ಕಾಲಕ್ಕೆ ಅದು ಸಿನಿಮಾ ಮಂದಿ ಟಚ್ ಮಾಡೋಕೂ ಹೆದರುವಂತಿದ್ದ ಸಬ್ಜೆಕ್ಟು. ಈಗ... ಹೆಚ್ಚೂಕಡಿಮೆ 45 ವರ್ಷಗಳ ನಂತರ ಅದೇ ಟೈಟಲ್ಲಿನ ಇನ್ನೊಂದು ಸಿನಿಮಾ ಬರುತ್ತಿದೆ. ನೋವಿನ ಸಂಗತಿಯೆಂದರೆ, ಆ ಎಡಕಲ್ಲು ಗುಡ್ಡದಲ್ಲಿ ನಂಜುಂಡನಾಗಿ ನಟಿಸಿದ್ದ ಚಂದ್ರಶೇಖರ್, ಈ ಚಿತ್ರದಲ್ಲೂ ನಟಿಸಿದ್ದಾರೆ. ಆದರೆ, ಅವರೇ ಇಲ್ಲ. ಚಿತ್ರದಲ್ಲಿ ಚಂದ್ರಶೇಖರ್ ಅವರದ್ದು ಪ್ರಮುಖ ಪಾತ್ರ ಎಂದಿದ್ದಾರೆ ನಿರ್ದೇಶಕ ವಿವಿನ್ ಸೂರ್ಯ. ನಿರ್ಮಾಪಕ ಪ್ರಕಾಶ್ ಅವರಿಗೆ ಹಲವು ಚಿತ್ರೋತ್ಸವಗಳಲ್ಲಿ ಸಿಕ್ಕಿರುವ ಪ್ರಶಸ್ತಿ, ಪುರಸ್ಕಾರಗಳು ಖುಷಿ ಕೊಟ್ಟಿವೆ. ಈಗ ಮೆಚ್ಚಬೇಕಾದ ಸರದಿ ಕನ್ನಡ ಚಿತ್ರರಸಿಕರದ್ದು. 

Kurukshetra Celebrity Show Gallery

Rightbanner02_gimmick_inside

Nanna Prakara Movie Images