` ಪುಟ್ಟಣ್ಣರ ಎಡಕಲ್ಲು ಗುಡ್ಡಕ್ಕೂ.. ಈ ಎಡಕಲ್ಲು ಗುಡ್ಡಕ್ಕೂ ಏನು ಸಂಬಂಧ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
edakallu guddadamele is different from old one
Edakallu Guddadamele Image

ಎಡಕಲ್ಲು ಗುಡ್ಡದ ಮೇಲೆ.. ಪುಟ್ಟಣ್ಣ ಕಣಗಾಲ್ ನಿರ್ದೇಶನದ 80ರ ದಶಕದ ಆ ಸಿನಿಮಾ, ಆಗಿನ ಕಾಲಕ್ಕಂತೂ ಕ್ರಾಂತಿಕಾರಿ ಕಥೆಯನ್ನು ಹೊಂದಿದ್ದ ಸಿನಿಮಾ. ಚಂದ್ರಶೇಖರ್ ಅವರನ್ನು ಆ ಚಿತ್ರದ ನಂತರ ಎಡಕಲ್ಲು ಗುಡ್ಡದ ಚಂದ್ರಶೇಖರ್ ಎಂದೇ ಗುರುತಿಸುವಂತಾಯ್ತು. ವಿವಾಹೇತರ ಸಂಬಂಧ ಮತ್ತು ವಿವಾಹದ ಪಾವಿತ್ರ್ಯತೆಯನ್ನು ಸಾರುವ ಚಿತ್ರದಲ್ಲಿ ಜಯಂತಿ ಮತ್ತು ಆರತಿ ಮನೋಜ್ಞವಾಗಿ ನಟಿಸಿದ್ದರು. ಅದು ಪುಟ್ಟಣ್ಣ ಕಣಗಾಲ್ ಸೃಷ್ಟಿಸಿದ ಮಾಸ್ಟರ್‍ಪೀಸ್‍ಗಳಲ್ಲಿ ಒಂದು.

ಈಗ ಅದೇ ಹೆಸರಿನ ಇನ್ನೊಂದು ಸಿನಿಮಾ ರಿಲೀಸಾಗುತ್ತಿದೆ. ಆದರೆ, ನಿರ್ದೇಶಕ ಪುಟ್ಟಣ್ಣ ಅಲ್ಲ, ವಿವಿನ್ ಸೂರ್ಯ. ಸಿನಿಮಾದಲ್ಲಿರುವುದು ವಯಸ್ಕರ ಕಥೆಯಲ್ಲ, ಮಕ್ಕಳ ಕಥೆ, ಮಕ್ಕಳ ಶಿಕ್ಷಣದ ಕಥೆ. ಶಿಕ್ಷಣ ಅನ್ನೋದು ಹೇಗೆ ಮಾರಾಟದ ಸರಕಾಗಿದೆ ಅನ್ನೊದನ್ನು ಹೇಳುವ ಚಿತ್ರ.

ಸಿನಿಮಾದಲ್ಲಿ ಸ್ವಾತಿ ನಾಯಕಿ. ಭಾರತಿ ವಿಷ್ಣುವರ್ಧನ್ ಪ್ರಿನ್ಸಿಪಾಲ್, ಶ್ರೀನಾಥ್ ಚರ್ಚ್‍ನ ಫಾದರ್. ಎಡಕಲ್ಲು ಗುಡ್ಡ ಖ್ಯಾತಿಯ ಚಂದ್ರಶೇಖರ್ ನಾಯಕಿಯ ತಂದೆ. ಇದು ಅವರು ನಟಿಸಿದ ಕೊನೆಯ ಸಿನಿಮಾ.

ಒಂದೊಳ್ಳೆಯ ಸಂದೇಶ ಇರುವ ಮನರಂಜನಾತ್ಮಕ ಸಿನಿಮಾ ಅನ್ನೋ ಕಾರಣಕ್ಕೇ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದೆ ಎಂದು ಹೇಳಿಕೊಂಡಿರುವುದು  ನಿರ್ಮಾಪಕ ಪ್ರಕಾಶ್. ಸಿನಿಮಾ ಈಗಾಗಲೇ ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

Kurukshetra Celebrity Show Gallery

Rightbanner02_gimmick_inside

Nanna Prakara Movie Images