` ರಾಜ, ರಾಧನ್ ಲವ್ವು ಭಲೇ ಜೋರು.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
raja loves radhe is complete love story
Raja Loves Radha Movie Image

ರಾಜ ಲವ್ಸ್ ರಾಧೆ.. ಹೆಸರು ಕೇಳಿದ ತಕ್ಷಣ, ಏನೋ ಮಿಸ್ ಹೊಡೀತಿದೆ ಅನ್ಸುತ್ತೆ. ಅರೆ.. ಕೃಷ್ಣ ಇರಬೇಕಿತ್ತಲ್ವಾ.. ರಾಜ ಯಾಕ್ ಬಂದಾ ಅನ್ನೋ ಕುತೂಹಲ ಹುಟ್ಟುತ್ತೆ. ಯಾಕ್ರೀ ಹೀಗೆ ಅಂದ್ರೆ, ಅದೇ ನಮ್ ಸಿನಿಮಾ ಸ್ಪೆಷಲ್ಲು. ರಾಜ, ರಾಧೆಯನ್ನ ಸಿಕ್ಕಾಪಟ್ಟೆ ಲವ್ ಮಾಡ್ತಾನೆ. ರಾಜ ಎಂದರೆ ಗಾಂಭೀರ್ಯ. ಹೀಗಾಗಿ ಈ ಲವ್ ಹೇಗಿರುತ್ತೆ ಅನ್ನೋದಕ್ಕಾಗಿ ಸಿನಿಮಾನೇ ನೋಡಬೇಕು ಅಂತಾರೆ ಹೀರೋ ವಿಜಯ್ ರಾಘವೇಂದ್ರ.

ಸಿನಿಮಾದಲ್ಲಿ ಲವ್, ತಾಯಿ ಸೆಂಟಿಮೆಂಟ್, ಮಸಾಲಾ, ಕಾಮಿಡಿ, ಆ್ಯಕ್ಷನ್ ಎಲ್ಲವೂ ಇದೆ. ಬಹಳ ದಿನಗಳ ನಂತರ ವಿಜಯ್ ರಾಘವೇಂದ್ರ, ಫುಲ್ ಕಮರ್ಷಿಯಲ್ ಸಿನಿಮಾದಲ್ಲಿ ನಟಿಸಿದ್ದಾರೆ ಅನ್ನೊದೇ ವಿಶೇಷ. ವಿಜಯ್ ರಾಘವೇಂದ್ರಗೆ ತಾಯಿಯಾಗಿ ಭವ್ಯ ನಟಿಸಿದ್ದರೆ, ರವಿಶಂಕರ್ ಅವರದ್ದು ಚಿತ್ರದಲ್ಲಿ ಪ್ರಧಾನ ಪಾತ್ರವಿದೆ. ಎಚ್‍ಎಲ್‍ಎನ್ ರಾಜ್ ನಿರ್ಮಾಣದ ಚಿತ್ರ ಮುಂದಿನ ವಾರ ರಿಲೀಸ್ ಆಗುತ್ತಿದೆ. 

#

Ayushmanbhava Movie Gallery

Damayanthi Audio and Trailer Launch Gallery