ಕಿಚ್ಚ ಸುದೀಪ್, ಚುನಾವಣಾ ಪ್ರಚಾರ ಹಾಗೂ ರಾಜಕೀಯದಿಂದ ಹಿಂದೆ ಸರಿದಿದ್ದಾರೆ. ಮೊದಲಿನ ಯೋಜನೆಯಂತೆಯೇ ಆಗಿದ್ದರೆ, ಇಂದು ಸುದೀಪ್ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪರ ಪ್ರಚಾರ ಕೈಗೊಳ್ಳಬೇಕಿತ್ತು. ಸ್ವತಃ ಸಿದ್ದರಾಮಯ್ಯ ಕೂಡಾ ಮೈಸೂರಿನಲ್ಲಿ ಈ ವಿಚಾರ ಹೇಳಿದ್ದರು. ಆದರೆ, ಈಗ ರಾಜಕೀಯ ಪ್ರಚಾರದಿಂದ ಹಿಂದೆ ಸರಿಯೋದಾಗಿ ಘೋಷಿಸಿದ್ದಾರೆ ಕಿಚ್ಚ ಸುದೀಪ್.
ಗೆಳೆಯ ರಾಜೂಗೌಡ ಪರವಾಗಿ ಸುರಪುರದಲ್ಲಿ, ಶ್ರೀರಾಮುಲು ಪರವಾಗಿ ಮೊಳಕಾಲ್ಮೂರಿನಲ್ಲಿ ಸುದೀಪ್ ಪ್ರಚಾರ ಮಾಡಿದ್ದರು. ಈ ಕುರಿತು ಈಗ ಸ್ಪಷ್ಟವಾಗಿ ತಿಳಿಸಿರುವ ಸುದೀಪ್, ಇನ್ನು ಮುಂದೆ ಗೆಳೆಯರು, ಅಭಿಮಾನಿಗಳ ಒತ್ತಡಕ್ಕೆ ಮಣಿದು ಪ್ರಚಾರ ಮಾಡೋದಿಲ್ಲ. ಎಲ್ಲರಿಗೂ ನನ್ನ ಮೇಲೆ ಪ್ರೀತಿ, ಅಭಿಮಾನ ಇದೆ ಅನ್ನೊದು ನಿಜ. ಆದರೆ, ನನ್ನ ಪ್ರಚಾರದಿಂದ ಚುನಾವಣೆ ಫಲಿತಾಂಶ ಬದಲಾಗಲಿದೆ ಎಂದೇನೂ ನಾನು ಭಾವಿಸುವುದಿಲ್ಲ. ಇದು ನಾನು ತೆಗೆದುಕೊಳ್ಳುತ್ತಿರುವ ಕಠಿಣ ನಿರ್ಧಾರ. ಅಭಿಮಾನಿಗಳು ಹಾಗೂ ಗೆಳೆಯರ ಪರವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. ನನ್ನ ಕಷ್ಟದ ದಿನಗಳಲ್ಲಿ ಜೊತೆಗಿದ್ದವರ ಪರ ಪ್ರಚಾರಕ್ಕೆ ಹೋಗಿದ್ದೆ. ಈ ಬಗ್ಗೆ ನನಗೇನೂ ವಿಷಾದವಿಲ್ಲ. ಆದರೆ ಇನ್ನು ಮುಂದೆ ಪ್ರಚಾರಕ್ಕೆ ಹೋಗುವುದಿಲ್ಲ. ಯಾವುದೇ ಪಕ್ಷವನ್ನು ಬೆಂಬಲಿಸುವ ಅಥವಾ ನಿರಾಕರಿಸುವ ಉದ್ದೇಶ ನನಗಿಲ್ಲ ಎಂದಿದ್ದಾರೆ ಸುದೀಪ್.
ಸುದೀಪ್ ಅವರ ನಿರ್ಧಾರ ಈಗ ಖುಷಿಕೊಟ್ಟಿರುವುದು ಅಭಿಮಾನಿಗಳಿಗೆ.
Related Articles :-