ಕಿಚ್ಚ ಸುದೀಪ್ ಪೈಲ್ವಾನ್ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಆ ಸಿನಿಮಾದಲ್ಲಿ ಸುದೀಪ್ ಎದುರು ನೆಗೆಟಿವ್ ರೋಲ್‍ನಲ್ಲಿ ನಟಿಸುತ್ತಿರುವುದು ಕಬೀರ್ ದುಹಾನ್ ಸಿಂಗ್. ಹೆಬ್ಬುಲಿಯಾಗಿ ಸುದೀಪ್ ಎದುರು ವಿಲನ್ ಆಗಿ ಮಿಂಚಿದ್ದ ಕಬೀರ್, ಈಗ ಮತ್ತೊಮ್ಮೆ ಪೈಲ್ವಾನ್‍ಗಾಗಿ ತಯಾರಾಗುತ್ತಿದ್ದಾರೆ.
ಕೇವಲ 12 ವಾರಗಳಲ್ಲಿ 6 ಪ್ಯಾಕ್ ಮಾಡಿರುವ ಕಬೀರ್, ಮೈಯ್ಯನ್ನು ಹುರಿಗೊಳಿಸಿದ್ದಾರೆ. ಕಬೀರ್‍ರ ಶ್ರಮಕ್ಕೆ ಶರಣಾಗಿರುವುದು ಕಿಚ್ಚ ಸುದೀಪ್. ನಿಮ್ಮ ಕಮಿಟ್‍ಮೆಂಟ್‍ಗೊಂದು ಹ್ಯಾಟ್ಸಾಫ್ ಎಂದಿರುವ ಸುದೀಪ್‍ಗೆ ನಿಮ್ಮ ಚಾರ್ಮ್‍ಗೆ ನಾನೂ ಸರಿಹೊಂದಬೇಕಿದೆ. ನಿಮ್ಮ ಹಾರೈಕೆ ಇರಲಿ ಎಂದಿದ್ದಾರೆ. ನಿಮ್ಮ ಬದ್ಧತೆ, ಪರಿಶ್ರಮಕ್ಕೆ ನಾನು ಸರಿದೂಗುವುದಿಲ್ಲ, ನಿಮ್ಮೊಂದಿಗೆ ತೆರೆ ಹಂಚಿಕೊಳ್ಳಲು ಕಾಯುತ್ತಿದ್ದೇನೆ ಎಂದಿದ್ದಾರೆ ಸುದೀಪ್.
ಕಬೀರ್‍ರ ಬದ್ಧತೆ ನಿರ್ದೇಶಕ ಕೃಷ್ಣ ಅವರಿಗೂ ಇಷ್ಟವಾಗಿ ಹೋಗಿದೆ. ಅವರ ಪಾತ್ರ ನೆಗೆಟಿವ್ ಶೇಡ್‍ನಲ್ಲಿದೆ ಎನ್ನುವ ಕೃಷ್ಣ, ಅವರು ವಿಲನ್ ಎಂದು ಹೇಳೋದಿಲ್ಲ. ಕುತೂಹಲವನ್ನು ಕಾಯ್ದಿರಿಸಲಾಗಿದೆ.