ಎಡಕಲ್ಲು ಗುಡ್ಡದ ಮೇಲೆ.. ಚಂದ್ರಶೇಖರ್ ಅಭಿನಯದ ಕೊನೆಯ ಸಿನಿಮಾ. ಚಂದ್ರಶೇಖರ್, ತಮಗೆ ಹೆಸರು ತಂದುಕೊಟ್ಟ ಸಿನಿಮಾದ ಟೈಟಲ್‍ನಲ್ಲಿಯೇ ಕೊನೆಯ ಸಿನಿಮಾ ಮಾಡಿರುವುದು ವಿಶೇಷ. ಸಿನಿಮಾದಲ್ಲಿ ಚಂದ್ರಶೇಖರ್ ಒಬ್ಬರೇ ಅಲ್ಲ, ಹಿರಿಯ ಕಲಾವಿದರ ದೊಡ್ಡ ದಂಡೇ ಇದೆ. ಭಾರತಿ ವಿಷ್ಣುವರ್ಧನ್, ಶ್ರೀನಾಥ್, ದತ್ತಣ್ಣ, ಸಿಹಿಕಹಿ ಚಂದ್ರು, ಸುಮಿತ್ರಾ, ಚಿದಾನಂದ್, ವೀಣಾ ಸುಂದರ್, ಭವ್ಯಶ್ರೀ, ಪದ್ಮಜಾ ರಾವ್, ಉಷಾ ಭಂಡಾರಿ ಮೊದಲಾದವರು ನಟಿಸಿದ್ದಾರೆ.
ತಾಯಿಯ ಪ್ರೀತಿಯಿಂದ ವಂಚಿತಳಾದ ಬಾಲಕಿಯೊಬ್ಬಳ ಬದುಕನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನ ಚಿತ್ರದಲ್ಲಿದೆ. ವಿವಿನ್ ಸೂರ್ಯ ನಿರ್ದೇಶನದ ಚಿತ್ರಕ್ಕೆ ಜಿ.ಪ್ರಕಾಶ್ ನಿರ್ಮಾಪಕರು. ಸಿನಿಮಾ ಇದೇ ಶುಕ್ರವಾರ ತೆರೆಗೆ ಬರುತ್ತಿದೆ.