` ಕನ್ನಡಕ್ಕೆ ಬರುತ್ತಿದ್ದಾರೆ ನವಾಜುದ್ದೀನ್ ಸಿದ್ಧಿಕಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
nawazzudin siddiqui in sandalwood
Nawazzudin Siddiqui Imagd

ನವಾಜುದ್ದೀನ್ ಸಿದ್ಧಿಕಿ. ಬಾಲಿವುಡ್‍ನಲ್ಲಿ ಕಲಾತ್ಮಕ ಚಿತ್ರಗಳ ಹೊಸ ಟ್ರೆಂಡ್ ಸೃಷ್ಟಿಸಿರುವ ನಟ. ಸರ್ಫ್‍ರೋಶ್ ಚಿತ್ರದಿಂದ ಪರಿಚಯವಾದ ಈ ರಂಗಭೂಮಿ ಕಲಾವಿದ ಖ್ಯಾತಿಗೆ ಬಂದಿದ್ದು ಮಾಂಝಿ ಚಿತ್ರದಿಂದ. ಪ್ರೀತಿಗಾಗಿ ಬೆಟ್ಟವನ್ನೇ ಕಡಿದು ರಸ್ತೆ ನಿರ್ಮಿಸುವ ಪ್ರೇಮಿಯಾಗಿ ನಟಿಸಿದ್ದ ಮಾಂಝಿ, ಈಗ ಬಾಲಿವುಡ್‍ನಲ್ಲಿ ಬ್ಯುಸಿ ನಟ. ಈಗ ಈ ನಟ ಕನ್ನಡಕ್ಕೆ ಬರುತ್ತಿದ್ದಾರಂತೆ.

ಬಾಲಿವುಡ್‍ನಲ್ಲಿ ನವಾಜುದ್ಧೀನ್ ಸಿದ್ಧಿಕಿ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್ ನಾಯಕಿ. ಈ ಚಿತ್ರವನ್ನು ಕನ್ನಡದಲ್ಲಿ ಕೂಡಾ ರಿಲೀಸ್ ಮಾಡೋಕೆ ಚಿತ್ರತಂಡ ನಿರ್ಧರಿಸಿದೆಯಂತೆ.

ಬಾಲಿವುಡ್ ಲೆಕ್ಕಕ್ಕೆ ನೋಡಿದರೆ, ಶ್ರದ್ಧಾಗೆ ಇದು 2ನೇ ಸಿನಿಮಾ. ಈಗಾಗಲೇ ಮಿಲನ್ ಟಾಕೀಸ್‍ನಲ್ಲಿ ನಾಯಕಿಯಾಗಿ ನಟಿಸಿರುವ ಶ್ರದ್ಧಾ, ಏಕಕಾಲದಲ್ಲಿ ಕನ್ನಡ, ತಮಿಳು ಹಾಗೂ ಹಿಂದಿಯಲ್ಲಿ ಬ್ಯುಸಿಯಾಗುತ್ತಿದ್ದಾರೆ.

 

Sagutha Doora Doora Movie Gallery

Popcorn Monkey Tiger Movie Gallery