ಶರಣ್ ಅಭಿನಯದ ಹೊಸ ಸಿನಿಮಾಗೆ ಅಧ್ಯಕ್ಷ ಇನ್ ಅಮೆರಿಕ ಅನ್ನೋ ಟೈಟಲ್ ಫಿಕ್ಸ್ ಆಗಿದೆ. ಅಂದಹಾಗೆ ಈ ಹೊಸ ಸಿನಿಮಾಗೂ, ಹಳೆ ಅಧ್ಯಕ್ಷನ ಕಥೆಗೂ ಯಾವುದೇ ಸಂಬಂಧ ಇಲ್ಲ. ಅಂದಹಾಗೆ ಇದು ಮಲಯಾಳಂನ ಟೂ ಕಂಟ್ರೀಸ್ ಚಿತ್ರದಿಂದ ಸ್ಫೂರ್ತಿ ಪಡೆದಿರುವ ಸಿನಿಮಾ ಅಂತೆ. ಚಿತ್ರಕ್ಕೆ ಯೋಗಾನಂದ ಮುದ್ದಾನ್ ನಿರ್ದೇಶಕ.
ವಿಕ್ಟರಿ ಸಿನಿಮಾದಲ್ಲಿ ಶರಣ್ ಜೊತೆ ಅಕ್ಕಾ ನಿನ್ ಮಗ್ಳು ನಂಗೆ ಚಿಕ್ಕೋಳಾಗಲ್ವಾ ಹಾಡಿಗೆ ಹೆಜ್ಜೆ ಹಾಕಿದ್ದ ರಾಗಿಣಿ, ಈ ಚಿತ್ರದಲ್ಲಿ ಶರಣ್ಗೆ ಹೀರೋಯಿನ್.
ತೆಲುಗಿನಲ್ಲಿ ಅಲಾ ಮೊದಲಯಿಂದಿ, ಕೇಶವ ಚಿತ್ರಗಳನ್ನು ನಿರ್ಮಾಣ ಮಾಡಿದ್ದ ವಿಶ್ವ ಹಾಗೂ ವಿವೇಕ್ ಎಂಬುವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮೇ 15ರಿಂದ ಚಿತ್ರದ ಚಿತ್ರೀಕರಣ ಶುರುವಾಗಲಿದ್ದು, ಸಂಪೂರ್ಣ ವಿದೇಶದಲ್ಲೇ ಚಿತ್ರೀಕರಣ ನಡೆಯಲಿದೆ.
Related Articles :-