ರಚಿತಾ ರಾಮ್, ನಟಸಾರ್ವಭೌಮ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಆ ಚಿತ್ರಕ್ಕೆ ರಚಿತಾ ಆಯ್ಕೆಯಾಗಿದ್ದು ಹೇಗೆ..? ಅದೊಂಥರಾ ಇಂಟ್ರೆಸ್ಟಿಂಗ್ ಸ್ಟೋರಿ. ಏಕೆಂದರೆ ನಟಸಾರ್ವಭೌಮ ಚಿತ್ರಕ್ಕೆ ಮೊದಲು ನಾಯಕಿಯಾಗಿದ್ದವರು ರಚಿತಾ ಅಲ್ಲ. ಆದರೆ, ಆ ನಾಯಕಿಯನ್ನು ಒಂದು ದಿನದ ನಂತರ ಚೇಂಜ್ ಮಾಡಲಾಯ್ತು. ಅದಾದ ನಂತರ ರಚಿತಾ ಚಿತ್ರಕ್ಕೆ ಬಂದಿದ್ದೇ ಇಂಟ್ರೆಸ್ಟಿಂಗ್.
ನಟಸಾರ್ವಭೌಮ ಚಿತ್ರದ ಮುಹೂರ್ತವಾದ ಮರುದಿನ ರಾತ್ರಿ 10.30ರ ಸುಮಾರಿಗೆ ರಚಿತಾ ರಾಮ್ ಅವರಿಗೆ ರಾಕ್‍ಲೈನ್ ವೆಂಕಟೇಶ್ ಅವರಿಂದ ಒಂದು ಮೆಸೇಜ್ ಬಂತು. ಫೋನ್ ಮಾಡಬಹುದಾ ಎಂದು ಕೇಳಿದ್ದರು ರಾಕ್‍ಲೈನ್ ವೆಂಕಟೇಶ್. ಓಕೆ ಎಂದ ನಂತರ ಫೋನ್ ಬಂತು. ನಟಸಾರ್ವಭೌಮ ಚಿತ್ರಕ್ಕೆ ಆಫರ್. ಪುನೀತ್ ಜೊತೆ. ನಾನು ಓಕೆ ಎಂದುಬಿಟ್ಟೆ. ಮರುದಿನ ಬೆಳಗ್ಗೆ ನಿರ್ದೇಶಕ ಪವನ್ ಅವರಿಂದ ಫೋನ್. ಶೂಟಿಂಗ್ ಸ್ಪಾಟ್‍ಗೆ ಬನ್ನಿ ಅಂತಾ. ಹೋದೆ.. ರಚಿತಾ ರಾಮ್ ನಟಸಾರ್ವಭೌಮ ಚಿತ್ರಕ್ಕೆ ಆಯ್ಕೆಯಾಗಿದ್ದು ಹೀಗೆ.
ನಾನು ಯಾವುದೇ ಚಿತ್ರಕ್ಕೆ ಶೂಟಿಂಗ್‍ಗೆ ಹೋಗುವಾಗ ಪ್ರಿಪೇರ್ ಆಗಿ ಹೋಗ್ತೇನೆ. ಅದರಲ್ಲೂ ಪುನೀತ್ ಸರ್. ಆದರೆ, ಅದೇ ಮೊದಲ ಬಾರಿಗೆ ಪುನೀತ್ ಸರ್ ಎದುರು ಪ್ರಿಪರೇಷನ್ ಇಲ್ಲದೆ ನಿಂತಿದ್ದೆ. ಹೇಗೋ ನಿಭಾಯಿಸಿದೆ. ಅದರ ನಂತರವೇ ಕಥೆಯ ವಿವರ ಪಡೆದುಕೊಂಡಿದ್ದು ಎಂದು ನೆನಪಿಸಿಕೊಂಡಿದ್ದಾರೆ ರಚಿತಾ.
ಸದ್ಯಕ್ಕೆ ರಚಿತಾ ನಟಸಾರ್ವಭೌಮ ಚಿತ್ರವಷ್ಟೇ ಅಲ್ಲದೆ, ಸೀತಾರಾಮ ಕಲ್ಯಾಣ, ಅಯೋಗ್ಯ ಚಿತ್ರಗಳಲ್ಲೂ ನಟಿಸುತ್ತಿದ್ದಾರೆ. ಇದರ ಮಧ್ಯೆ ಕಾಮಿಡಿ ಟಾಕೀಸ್‍ನಲ್ಲಿ ನಗುವ ಗೊಂಬೆಯಾಗಿದ್ದಾರೆ. ಸಿಕ್ಕಾಪಟ್ಟೆ ಬ್ಯುಸಿ.