ಹರಿಪ್ರಿಯಾ d/o ಪಾರ್ವತಮ್ಮ. ಅರೆ.. ಇದ್ಯಾವಾಗ ಆಯ್ತು ಅಂದ್ಕೋಬೇಡಿ. ಇದು ಹರಿಪ್ರಿಯಾ ನಟಿಸಲಿರುವ ಹೊಸ ಸಿನಿಮಾದ ಟೈಟಲ್. ಅಂದಹಾಗೆ ಅದು ಹರಿಪ್ರಿಯಾ ಅಭಿನಯದ 25ನೇ ಸಿನಿಮಾ.
ಹರಿಪ್ರಿಯಾ ಪಾರ್ವತಮ್ಮನಾಗಿದ್ದರೆ, ಪಾರ್ವತಮ್ಮನಾಗಿರೋದು ಸುಮಲತಾ ಅಂಬರೀಶ್. ಚಿತ್ರದಲ್ಲಿ ಹರಿಪ್ರಿಯಾ ಡಿಟೆಕ್ಟಿವ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಟೈಟಲ್‍ನಲ್ಲಿ ಪಾರ್ವತಮ್ಮ ಎಂಬ ಹೆಸರಿದೆಯಾದರೂ, ರಾಜ್‍ಕುಮಾರ್ ಫ್ಯಾಮಿಲಿಗೂ, ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಅನ್ನೋದು ಹರಿಪ್ರಿಯಾ ಅವರೇ ಕೊಟ್ಟಿರುವ ಸ್ಪಷ್ಟನೆ.
ಸಿನಿಮಾದಲ್ಲಿರೋದು ಪತ್ತೇದಾರಿಕೆಯ ಕಥೆ. ಪತ್ತೇದಾರಿಕೆ ಮತ್ತು ತಾಯಿ-ಮಗಳ ಬಾಂಧವ್ಯದ ಕಥೆ ಚಿತ್ರದಲ್ಲಿದೆ. ಚಿತ್ರಕ್ಕೆ ಶಂಕರ್ ಎಂಬುವವರು ನಿರ್ದೇಶಕರು. ಶಂಕರ್ ಈ ಹಿಂದೆ ಪವನ್ ಒಡೆಯರ್ ಅವರ ಬಳಿ ಸಹನಿರ್ದೇಶಕರಾಗಿದ್ದವರು. ಚಿತ್ರದ ಕಥೆ ಚೆನ್ನಾಗಿದೆ. ಇದೇ ಮೊದಲ ಬಾರಿಗೆ ಇನ್‍ವೆಸ್ಟಿಗೇಷನ್ ಆಫೀಸರ್ ಆಗಿ ನಟಿಸುತ್ತಿದ್ದೇನೆ. ಕೆಲವು ನೈಜ ಘಟನೆಗಳನ್ನಿಟ್ಟುಕೊಂಡು ಕಥೆ ಹೆಣೆಯಲಾಗಿದೆ ಎಂದು ಚಿತ್ರದ ಗುಟ್ಟು ಬಿಟ್ಟುಕೊಟ್ಟಿದ್ದಾರೆ ಹರಿಪ್ರಿಯಾ.