` ಕೋಟ್ಯಧಿಪತಿ ಹಾಟ್‍ಸೀಟ್‍ಗೆ ಪುನೀತ್ ಬರಬೇಕು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ramesh wants puneeth as first contestant for kannada kotyadhipathi
Ramesh, Puneeth Image

ಕನ್ನಡದ ಕೋಟ್ಯಧಿಪತಿ ರಿಯಾಲಿಟಿ ಶೋನ ಆ್ಯಂಕರ್ ಆಗಿ ಪುನೀತ್ ರಾಜ್‍ಕುಮಾರ್ ಸ್ಥಾನಕ್ಕೆ ರಮೇಶ್ ಅರವಿಂದ್  ಬರುತ್ತಿದ್ದಾರೆ. ಮೇ 7ರಿಂದ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಶುರುವಾಗಲಿದೆ. ಹೀಗಿರುವಾಗ ರಮೇಶ್ ಅರವಿಂದ ಅವರ ಎದುರು ಹಾಟ್‍ಸೀಟ್‍ನಲ್ಲಿ ಮೊದಲಿಗೆ ಯಾರು ಬಂದು ಕುಳಿತರೆ ಚೆಂದ.. ಈ ಪ್ರಶ್ನೆಗೆ ಸ್ವತಃ ರಮೇಶ್ ಅರವಿಂದ್ ಉತ್ತರ ಕೊಟ್ಟಿದ್ದಾರೆ.

ಹಾಟ್‍ಸೀಟ್‍ನಲ್ಲಿ ಮೊದಲ ಸ್ಪರ್ಧಿಯಾಗಿ ಪುನೀತ್ ರಾಜ್‍ಕುಮಾರ್ ಅವರನ್ನೇ ನೋಡಲು ಬಯಸುತ್ತೇನೆ ಎಂದಿದ್ದಾರೆ ರಮೇಶ್ ಅರವಿಂದ್. ಅದಕ್ಕೆ ಕಾರಣವೂ ಇದೆ. ರಮೇಶ್ ಅವರಿಗೆ ತುಂಬಾ ಒಳ್ಳೆಯ ಹೆಸರು ತಂದುಕೊಟ್ಟ ವೀಕೆಂಡ್ ವಿತ್ ರಮೇಶ್ ಶೋ ಶುರುವಾಗಿದ್ದೇ ಪುನೀತ್ ರಾಜ್‍ಕುಮಾರ್ ಅವರಿಂದ. ಹೀಗಾಗಿ ಈ ಶೋನಲ್ಲೂ ಅವರೇ ಮೊದಲ ಸ್ಪರ್ಧಿಯಾಗಿ ಬರಲಿ ಎಂದು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾರೆ ರಮೇಶ್ ಅರವಿಂದ್.

ರಮೇಶ್ ಅವರು ಈ ಶೋ ಒಪ್ಪಿಕೊಂಡ ನಂತರ ಸ್ವತಃ ಪುನೀತ್, ರಮೇಶ್ ಅವರಿಗೆ ಫೋನ್ ಮಾಡಿ ವಿಷ್ ಮಾಡಿದರಂತೆ. ಇನ್ನು ಒಂದು ತಿಂಗಳು. ಕೋಟ್ಯಧಿಪತಿ ಶುರುವಾಗಲಿದೆ.