ಕೋಟಿಗೊಬ್ಬ-3, ಸ್ವತಃ ಸುದೀಪ್ ಕಥೆ ಬರೆದಿರುವ ಚಿತ್ರ. ಸೂರಪ್ಪ ಬಾಬು ನಿರ್ಮಾಣದಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ, ಶಿವಕಾರ್ತಿಕ್ ನಿರ್ದೇಶಕ. ಈಗಾಗಲೇ ಮುಹೂರ್ತ ಆಚರಿಸಿಕೊಂಡಿರುವ ಚಿತ್ರದ ಶೂಟಿಂಗ್ ಸದ್ದಿಲ್ಲದೆ ಶುರುವಾಗಿಬಿಟ್ಟಿದೆ. ಅದೂ ಸುದೀಪ್ ಇಲ್ಲದೆಯೇ..
ಸುದೀಪ್, ತಮ್ಮದೇ ಬ್ಯಾನರ್‍ನ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಚಿತ್ರೀಕರಣದಲ್ಲಿ ಸಂಪೂರ್ಣ ಬ್ಯುಸಿಯಾಗಿಬಿಟ್ಟಿದ್ದಾರೆ. ಆ ಚಿತ್ರದ ಹಾಡುಗಳ ಶೂಟಿಂಗ್ ಬಾಕಿಯಿದೆಯಂತೆ. ಆ ಶೂಟಿಂಗ್ ಮುಗಿದ ನಂತರ ಕೋಟಿಗೊಬ್ಬ-3 ಶೂಟಿಂಗ್‍ಗೆ ಬರಲಿದ್ದಾರೆ ಕಿಚ್ಚ.
ಹೀಗಾಗಿ ಶೂಟಿಂಗ್ ಆರಂಭಿಸಿರುವ ಚಿತ್ರತಂಡ, ಸುದೀಪ್ ಅವರಿಲ್ಲದೇ ಇರುವ ದೃಶ್ಯಗಳ ಶೂಟಿಂಗ್ ನಡೆಸುತ್ತಿದೆ. ಅಂದಹಾಗೆ ಕೋಟಿಗೊಬ್ಬ-3 ಚಿತ್ರಕ್ಕೆ ಹೀರೋಯಿನ್ ಇನ್ನೂ ಅಂತಿಮವಾಗಿಲ್ಲ.