ಕಾನೂರಾಯಣ ಚಿತ್ರದಲ್ಲೊಂದು ಎಲೆಕ್ಷನ್ ಹಾಡಿದೆ. ವೋಟು ಕೇಳೋಕೆ ಊರಿಗೆ ಬರುವ ರಾಜಕಾರಣಿಗಳು, ನಾವು ನಿಮ್ಮವರು, ನಿಮ್ಮ ಸೋದರರು, ನೆಂಟು ಎಂದು ಹೇಳಿಕೊಂಡು ಜನರನ್ನು ಹೇಗೆಲ್ಲ ಯಾಮಾರಿಸ್ತಾರೆ ಅನ್ನೋದನ್ನು ವಿಡಂಬನಾತ್ಮಕವಾಗಿ ಹೇಳೋ ಹಾಡದು.
ಮೊದಲೇ ಎಲೆಕ್ಷನ್ ಟೈಂ. ಅದಕ್ಕೆ ತಕ್ಕಂತೆ ಸಮಯೋಚಿತವಾಗಿ ಸಿಕ್ಕಿರುವ ಹಾಡು, ಇದರಿಂದಲೇ ವೈರಲ್ ಆಗಿಬಿಟ್ಟಿದೆ. ನಾಗಾಭರಣ ನಿರ್ದೇಶನದ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರುತ್ತಿದೆ. ಚಿತ್ರದಲ್ಲಿ ಈ ಹಾಡು ಸೃಷ್ಟಿಯಾಗಿರೋದು ಗ್ರಾಮ ಪಂಚಾಯತ್ ಚುನಾವಣೆ ಸನ್ನಿವೇಶಕ್ಕಾಗಿ.
ಸ್ಕಂದ ಅಶೋಕ್, ಸೋನುಗೌಡ, ದೊಡ್ಡಣ್ಣ, ಕರಿಸುಬ್ಬು, ಸುಂದರ್ ರಾಜ್, ಗಿರಿಜಾ ಲೋಕೇಶ್, ನೀನಾಸಂ ಅಶ್ವತ್ಥ್ ಮೊದಲಾದವರು ನಟಿಸಿದ್ದಾರೆ. ವಾಸುಕಿ ವೈಭವ್ ಸಂಗೀತ ನೀಡಿರುವ ಚಿತ್ರಕ್ಕೆ ಕಥೆ ಬರೆದಿರುವುದು ಹರೀಶ್ ಹಾಗಲವಾಡಿ. ಚಿತ್ರಕಥೆ ಬರೆದಿರುವುದು ನಾಗಾಭರಣರ ಪುತ್ರ ಪನ್ನಗಾಭರಣ.