ಅಸತೋಮಾ ಸದ್ಗಮಯ ಚಿತ್ರದಲ್ಲೊಂದು ಹಾಡಿದೆ. ನಾ ತೆರೆದೆ ತುಂಬಾ ಹಳೆಯ ಪುಟವ.. ಅನ್ನೋ ಹಾಡದು. ಆ ಹಾಡು ಈಗ ಮಕ್ಕಳಿಗೆ ಇಷ್ಟವಾಗುತ್ತಿದೆ. ಏಕೆಂದರೆ, ಆ ಹಾಡಿನಲ್ಲಿರೋದು ಅಮ್ಮನ ಮೇಲಿನ ಪ್ರೀತಿ. ಅಮ್ಮನ ಪ್ರೀತಿಗೆ ಹಾತೊರೆಯುವ ಪ್ರತಿ ಮನಸ್ಸಿಗೂ ಈ ಹಾಡು ಅರ್ಪಣೆ ಎಂದಿದೆ ಚಿತ್ರತಂಡ.
ಹಾಡು ಹಾಡಿರುವುದು ಅನುರಾಧಾ ಭಟ್. ಅಪ್ಪ ಐ ಲವ್ ಯೂ ಹಾಡು ಹಾಡಿದ್ದ ಅನುರಾಧಾ ಭಟ್ ಅವರ ಧ್ವನಿ, ಈಗ ಅಮ್ಮನ ಮೇಲಿನ ಹಾಡಿನಲ್ಲೂ ಮ್ಯಾಜಿಕ್ ಮಾಡಿದೆ. ಈ ಹಾಡಿಗೆ ಸಾಹಿತ್ಯ ನೀಡಿರುವುದು ವಹಾಬ್ ಸಲೀಂ. ಸಂಗೀತವೂ ಅವರದ್ದೇ. ಹಾಡು ಕೇಳುವ ಸರದಿ ನಿಮ್ಮದಾಗಲಿ.