` ಹೃತಿಕ್ ರೋಷನ್ ದಾರಿಯಲ್ಲಿ ಧ್ವಜ ಹೀರೋ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
dhwaja hero ravi
Ravi Gowda Image From Dhwaja

ಡಬಲ್ ರೋಲ್, ತ್ರಿಬಲ್ ರೋಲ್‍ನಲ್ಲಿ ನಟಿಸಬೇಕು ಅನ್ನೋದು ಪ್ರತಿಯೊಬ್ಬ ಕಲಾವಿದರ ಕನಸು. ಕನ್ನಡದಲ್ಲಿ ಅತೀ ಹೆಚ್ಚು ದ್ವಿಪಾತ್ರ, ತ್ರಿಪಾತ್ರಗಳಲ್ಲಿ ನಟಿಸಿರುವ ಹಿರಿಮೆ ವಿಷ್ಣುವರ್ಧನ್ ಅವರದ್ದು. ಡಾ.ರಾಜ್, ಅಂಬರೀಷ್, ರವಿಚಂದ್ರನ್, ಶಿವರಾಜ್‍ಕುಮಾರ್, ದರ್ಶನ್, ಸುದೀಪ್ ಮೊದಲಾದವರೆಲ್ಲ ಡಬಲ್ ತ್ರಿಬಲ್ ರೋಲ್‍ಗಳಲ್ಲಿ ಮಿಂಚಿದವರೇ. ಆದರೆ, ಇವರ್ಯಾರಿಗೂ ಮೊದಲ ಚಿತ್ರದಲ್ಲೇ ಡಬಲ್ ರೋಲ್‍ನಲ್ಲಿ ನಟಿಸುವ ಅದೃಷ್ಟ ಇರಲಿಲ್ಲ. ಆದರೆ, ಮೊದಲ ಸಿನಿಮಾದಲ್ಲೇ ಡಬಲ್ ರೋಲ್ ಮಾಡಿದವರಲ್ಲಿ ಬಾಲಿವುಡ್‍ನ ಹೃತಿಕ್ ರೋಷನ್ ಇದ್ದಾರೆ. ಅವರ ಅಭಿನಯದ ಮೊದಲ ಸಿನಿಮಾ ಕಹೋನಾ ಪ್ಯಾರ್ ಹೈ ಚಿತ್ರದಲ್ಲಿ ಹೃತಿಕ್ ಡಬಲ್ ರೋಲ್‍ನಲ್ಲಿ ನಟಿಸಿದ್ದರು.

ಈಗ ಆ ದಾಖಲೆಯನ್ನು ಕನ್ನಡದಲ್ಲಿ ಮಾಡಲು ಹೊರಟಿರುವುದು ರವಿಗೌಡ. ಧ್ವಜ, ರವಿ ಗೌಡ ನಾಯಕರಾಗಿ ನಟಿಸಿರುವ ಮೊದಲ ಸಿನಿಮಾ. ಈ ಚಿತ್ರದಲ್ಲಿ ರವಿ ಗೌಡ ಅವರದ್ದು ಡಬಲ್ ರೋಲ್. ಅಣ್ಣತಮ್ಮ ಎರಡೂ ಕ್ಯಾರೆಕ್ಟರ್‍ಗಳಲ್ಲಿ ನಟಿಸಿರುವ ರವಿ ಗೌಡಗೆ ಜೋಡಿಯಾಗಿ ಪ್ರಿಯಾಮಣಿ ಮತ್ತು ದಿವ್ಯಾ ಇದ್ದಾರೆ.

ರಾಜಕಾರಣದ ಕಥೆ ಹೊಂದಿರುವ ಚಿತ್ರಕ್ಕೆ ಅಶೋಕ್ ಕಶ್ಯಪ್ ನಿರ್ದೇಶನವಿದೆ. ರಾಜಕೀಯ ಕಾರ್ಯಕರ್ತನೊಬ್ಬನ ಕೊಲೆ, ನಂತರ ಅದನ್ನು ಮುಚ್ಚಿ ಹಾಕಲು ನಡೆಯುವ ತಂತ್ರ ಕುತಂತ್ರಗಳ ಕಥೆ ಚಿತ್ರದಲ್ಲಿದೆ. ಚುನಾವಣೆ ಹೊತ್ತಿನಲ್ಲೇ ಬಿಡುಗಡೆಯಾಗುತ್ತಿರುವ ಸಿನಿಮಾ, ಇದೇ ಕಾರಣಕ್ಕೆ ಕುತೂಹಲ ಕೆರಳಿಸಿದೆ.