` ದರ್ಶನ್ ಜೊತೆ ನಟಿಸೋಕೆ ಶಿವಣ್ಣ ರೆಡಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
shivarajkumar ready to act with darshan
Darshan, Shivarajkumar Image

ಸೆಂಚುರಿ ಸ್ಟಾರ್ ಶಿವರಾಜ್‍ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್.. ಇಬ್ಬರೂ ಒಟ್ಟಿಗೇ ನಟಿಸಿದರೆ ಹೇಗಿರುತ್ತೆ..? ಅಭಿಮಾನಿಗಳಿಗೆ ಹಬ್ಬದೂಟ ಗ್ಯಾರಂಟಿ. ಇತ್ತೀಚೆಗೆ ಗಾಂಧಿನಗರದಲ್ಲಿ ದರ್ಶನ್ ಮತ್ತು ಶಿವರಾಜ್‍ಕುಮಾರ್ ಒಟ್ಟಿಗೇ ನಟಿಸುತ್ತಿದ್ದಾರೆ ಎಂಬ ಸುದ್ದಿಗೆ ಸಿಕ್ಕಾಪಟ್ಟೆ ರೆಕ್ಕೆಪುಕ್ಕ ಬಂದುಬಿಟ್ಟಿತ್ತು. ಇವುಗಳಿಗೆಲ್ಲ ಶಿವಣ್ಣ ಉತ್ತರ ಕೊಟ್ಟಿದ್ದಾರೆ.

ಕಲರ್ಸ್‍ನಲ್ಲಿ ರಿಯಾಲಿಟಿ ಶೋ ನಡೆಸಿಕೊಡುತ್ತಿರುವ ಶಿವಣ್ಣ, ತಮ್ಮ ಸೋದರಳಿಯ ಶ್ರೀಮುರಳಿ ಮತ್ತು ಮಫ್ತಿ ನಿರ್ದೇಶಕ ನರ್ತನ್ ಅವರೊಂದಿಗೆ ಮಾತನಾಡುತ್ತಿರುವಾಗ ದರ್ಶನ್ ಜೊತೆ ನಟಿಸುವ ಕನಸು ಹೊರಹಾಕಿದ್ದಾರೆ.

ನಿರ್ದೇಶಕ ನರ್ತನ್‍ಗೆ ಮಫ್ತಿ - 2 ಮಾಡಿದರೂ ರೆಡಿ. ಭೈರತಿ ರಣಗಲ್ಲು ಮಾಡಿದರೂ ರೆಡಿ. ಮಫ್ತಿ-2 ಚಿತ್ರದಲ್ಲಿ ಶಿವಣ್ಣ ಜೊತೆ ದರ್ಶನ್ ಅಂತಾ ಇದೆ. ಯಾರು ಬೇಡ ಅಂತಾರೆ. ಮಾಡಿ. ಎಲ್ಲರ ಜೊತೆ ಸಿನಿಮಾ ಮಾಡಬೇಕು ಅನ್ನೋದೇ ನನ್ನ ಆಸೆ ಎಂದು ಹೇಳಿದರು ಶಿವರಾಜ್‍ಕುಮಾರ್.

ಶಿವರಾಜ್‍ಕುಮಾರ್ ಅವರೇನೋ ಆಸೆ ಹೇಳಿಕೊಂಡಿದ್ದಾರೆ. ಈಗ ಇಬ್ಬರನ್ನೂ ಒಟ್ಟಿಗೇ ಸೇರಿಸುವಂತಹ ಕಥೆ, ನಿರ್ದೇಶಕ ಸಿಗಬೇಕು. ಅಷ್ಟೆ.

 

Padarasa Movie Gallery

Rightbanner02_uddishya_inside

Kumari 21 Movie Gallery