` ಮತ್ತೆ ಹಾಡಿದರು ರಾಘವೇಂದ್ರ ರಾಜ್‍ಕುಮಾರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
raghavendra rajkumar to comeback as singer
Raghavendra Rajkumar Image

ನಟ ರಾಘವೇಂದ್ರ ರಾಜ್‍ಕುಮಾರ್, ನಾಯಕರಷ್ಟೇ ಅಲ್ಲ, ಗಾಯಕರಾಗಿಯೂ ಹೆಸರು ಮಾಡಿರುವವರು. ಅನುರಾಗದ ಅಲೆಗಳು, ಸ್ವಸ್ತಿಕ್ ಸೇರಿದಂತೆ ಹಲವು ಚಿತ್ರಗಳಲ್ಲಿ ಹಾಡನ್ನೂ ಹಾಡಿರುವ ರಾಘವೇಂದ್ರ ರಾಜ್‍ಕುಮಾರ್‍ಗೆ ಶಾಸ್ತ್ರೀಯ ಸಂಗೀತದ ಹಿನ್ನೆಲೆಯೂ ಇದೆ. ಅನಾರೋಗ್ಯದಿಂದಾಗಿ ನಟನೆಯಿಂದ ದೂರವೇ ಉಳಿದಿದ್ದ ರಾಘವೇಂದ್ರ ರಾಜ್‍ಕುಮಾರ್, ಗಾಯಕರಾಗಿ ಚಿತ್ರರಂಗಕ್ಕೆ ವಾಪಸ್ ಬಂದಿದ್ದಾರೆ.

ಭಗವಾನ್ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಆಡುವ ಗೊಂಬೆ ಚಿತ್ರದಲ್ಲಿ ರಾಘವೇಂದ್ರ ರಾಜ್‍ಕುಮಾರ್ ಹಾಡಿದ್ದಾರೆ. ಅನಂತ್‍ನಾಗ್, ಸಂಚಾರಿ ವಿಜಯ್ ಪ್ರಮುಖ ಪಾತ್ರದಲ್ಲಿರುವ ಚಿತ್ರ, ಭಗವಾನ್ ಅವರ ನಿರ್ದೇಶನದ 50ನೇ ಚಿತ್ರ ಎನ್ನುವುದು ವಿಶೇಷ.

Adhyaksha In America Success Meet Gallery

Ellidhe Illitanaka Movie Gallery