` ಚಾಲೆಂಜಿಂಗ್ ಸ್ಟಾರ್ ತೀರ್ಥಯಾತ್ರೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan on pilgrimage
Darshan visits different temples

ಚಾಲೆಂಜಿಂಗ್ ಸ್ಟಾರ್ ದರ್ಶನ್, ತೀರ್ಥಯಾತ್ರೆ ನಡೆಸುತ್ತಿದ್ದಾರೆ. ಈ ಬಾರಿ ಅವರ ಜೊತೆ ಗೆಳೆಯರಾದ ಸೃಜನ್ ಲೋಕೇಶ್, ಧನಂಜಯ ಕೂಡ ಇರೋದು ವಿಶೇಷ.

ಎಲ್ಲರೂ ಒಟ್ಟಿಗೇ ಮೊದಲು ಹೋಗಿರುವುದು ಉಡುಪಿಯ ಹಿರಿಯಡ್ಕದಲ್ಲಿರುವ ವೀರಭದ್ರಸ್ವಾಮಿ ದೇವಸ್ಥಾನಕ್ಕೆ. ಅಲ್ಲಿ ಜೀರ್ಣೋದ್ಧಾರಗೊಂಡಿರುವ ವೀರಭದ್ರ ಸ್ವಾಮಿಯ ದರ್ಶನ ಪಡೆದ ದರ್ಶನ್ ಮತ್ತು ಗೆಳೆಯರು, ನಂತರ ಧರ್ಮಸ್ಥಳಕ್ಕೆ ಹೋಗಿದ್ದಾರೆ.

ಧರ್ಮಸ್ಥಳ ಮಂಜನಾಥ ಸ್ವಾಮಿಯ ದರ್ಶನ ಪಡೆದು, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆದಿದ್ದಾರೆ.

ಇದಾದ ನಂತರ ಗೆಳೆಯರ ಬಳಗ ಹೋಗಿರುವುದು ಕುಕ್ಕೆ ಸುಬ್ರಹ್ಮಣ್ಯಕ್ಕೆ. ಅಲ್ಲಿ ಪೂಜೆ ಮುಗಿಸಿದ ನಂತರ, ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

Phailwaan Audio Release Gallery

Rightbanner02_gimmick_inside

Nanna Prakara Audio Release Images