ಡಾ.ರಾಜ್‍ಕುಮಾರ್ ಹುಟ್ಟುಹಬ್ಬ, ಕನ್ನಡಿಗರ ಪಾಲಿಗೆ ಹಬ್ಬ. ಈ ವಿಶೇಷ ಹಬ್ಬದ ದಿನ ಅಣ್ಣಾವ್ರ ಮಕ್ಕಳ ಚಿತ್ರ ಸೆಟ್ಟೇರದಿದ್ದರೆ ಹೇಗೆ..? ಈ ಬಾರಿಯೂ ಶಿವರಾಜ್‍ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಅಭಿನಯದ ಚಿತ್ರಗಳು ಸೆಟ್ಟೇರುತ್ತಿವೆ.
ಸಂತೋಷ್ ಆನಂದ್‍ರಾಮ್ ನಿರ್ದೇಶನದ ದೇವತಾಮನುಷ್ಯ ಚಿತ್ರಕ್ಕೆ ಇಂದು ಮುಹೂರ್ತ. ಅಂದಹಾಗೆ ದೇವತಾಮನುಷ್ಯ ಅನ್ನೋ ಟೈಟಲ್ ಇನ್ನೂ ಫೈನಲ್ ಆಗಿಲ್ಲ. ಅದೇ ಟೈಟಲ್‍ನ್ನು ಚಿತ್ರಕ್ಕೆ ಇಡಬಹುದು ಎಂಬ ನಿರೀಕ್ಷೆ ಇದೆ.
ಇನ್ನು ಶಿವರಾಜ್‍ಕುಮಾರ್ ಅಭಿನಯದ ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ರುಸ್ತುಂ ಚಿತ್ರಕ್ಕೂ ರಾಜ್ ಹುಟ್ಟುಹಬ್ಬದ ದಿನವೇ ಮುಹೂರ್ತ. ಶ್ರದ್ಧಾ ಶ್ರೀನಾಥ್, ಶಿವರಾಜ್‍ಕುಮಾರ್‍ಗೆ ನಾಯಕಿ. ಮಯೂರಿ, ಶಿವಣ್ಣನ ತಂಗಿಯಾಗಿ ನಟಿಸುತ್ತಿದ್ದಾರೆ.