ತುಂಬ ವರ್ಷಗಳ ಹಿಂದೆಯೇ ಹಂಸಲೇಖ ಅವರಿಗೊಂದು ಹೆಸರಿಟ್ಟಿದ್ದರು. ಕೆಕೆ ಎಂದು ಕರೆಯುತ್ತಿದ್ದರು. ಏಕೆಂದರೆ, ಅವರನ್ನು ನೋಡಿದಾಗಲೆಲ್ಲ ಹಂಸಲೇಖ ಅವರಿಗೆ ಗಿರೀಶ್ ಕಾರ್ನಾಡ್ ನೆನಪಾಗುತ್ತಿತ್ತು. ಆದರೆ, ಇವರು ಅವರಷ್ಟು ಕಲರ್ ಇಲ್ಲ. ಸ್ವಲ್ಪ ಕಪ್ಪು. ಹೀಗಾಗಿಯೇ ಕೆಕೆ ಎಂದು ಹೆಸರಿಟ್ಟಿದ್ದರು ಹಂಸಲೇಖ. ಅಂದಹಾಗೆ ಹಂಸಲೇಖ ಹಾಗೆ ಕೆಕೆ ಎಂದು ನಾಮಕರಣ ಮಾಡಿದ್ದು ಯಾರಿಗೆ ಅಂದುಕೊಂಡಿದ್ದೀರಿ.. ಯೋಗರಾಜ್ ಭಟ್ಟರಿಗೆ. ಕೆಕೆ ಎಂದರೆ ಕರಿ ಕಾರ್ನಾಡ್ ಎಂದರ್ಥ.. ಅಷ್ಟೆ.
ಭಟ್ಟರ ಪಂಚರಂಗಿ ಆಡಿಯೋ ಕಂಪೆನಿ ಉದ್ಘಾಟನೆ ವೇಳೆ ಈ ಮಾತು ಹೇಳಿಕೊಂಡ ಹಂಸಲೇಖ, ತಮ್ಮ ಹಾಗೂ ಭಟ್ಟರ ನಡುವಿನ ಸಾಮ್ಯತೆಯನ್ನು ಹೇಳಿಕೊಂಡರು. ಚಿ.ಉದಯಶಂಕರ್ ಬರೆದದ್ದನ್ನೇ ನಾನು ಬರೆಯಬಾರದು, ಹೊಸದೇನನ್ನಾದರೂ ಬರೆಯಬೇಕು ಎಂಬ ಹಠಕ್ಕೆ ಬಿದ್ದು ನಾನು ಬರೆದೆ. ಹಂಸಲೇಖ ಬರೆದಿದ್ದನ್ನು ನಾನು ಬರೆಯಬಾರದು ಎಂದು ಹಠ ತೊಟ್ಟವರಂತೆ ಯೋಗರಾಜ್ ಭಟ್ ಬರೆಯುತ್ತಿದ್ದಾರೆ ಎಂದು ಹೊಗಳಿದ್ದಾರೆ ಹಂಸಲೇಖ.