ಯೋಗರಾಜ್ ಭಟ್ಟರು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಪಂಚರಂಗಿ ಅನ್ನೋ ಸಿನಿಮಾ ನಿರ್ದೇಶಿಸುತ್ತಿರುವ ಯೋಗರಾಜ್ ಭಟ್, ಈಗ ಅದೇ ಹೆಸರಿನಲ್ಲಿ ಆಡಿಯೋ ಕಂಪೆನಿ ಹುಟ್ಟುಹಾಕಿದ್ದಾರೆ. ಆ ಕಂಪೆನಿ ಉದ್ಘಾಟಿಸಿದ್ದು ನಾದಬ್ರಹ್ಮ ಹಂಸಲೇಖ ಅನ್ನೋದು ವಿಶೇಷ. ಹಾಗೆ ತಮ್ಮ ಆಡಿಯೋ ಕಂಪೆನಿ ಉದ್ಘಾಟಿಸಿದ ಸಂಗೀತ ಸಾಮ್ರಾಟನಿಗೆ ಯೋಗರಾಜ್ ಭಟ್ ಕೊಟ್ಟ ಉಡುಗೊರೆ ಹಾರ್ಮೋನಿಯಂ.
ಕಂಪೆನಿಯಿಂದ ಮೊದಲನೆಯದಾಗಿ ಬಿಡುಗಡೆಯಾದ ಆಡಿಯೋ ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರದ್ದು. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಚಿತ್ರದ ಆಡಿಯೋ ಬಿಡುಗಡೆ ಮೂಲಕ ಭಟ್ಟರು ಹೊಸ ಸಾಹಸ ಆರಂಭಿಸಿಬಿಟ್ಟಿದ್ದಾರೆ. ಶುಭವಾಗಲಿ.