` ಎಲೆಕ್ಷನ್ ಸ್ಟಾರ್ಸ್ ಯಾರು..? ಮಿಸ್ಸಿಂಗ್ ಯಾರು..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shining and missing stars this elections
Elections 2018

ಪ್ರತಿ ಬಾರಿ ಚುನಾವಣೆ ಎದುರಾದಾಗಲೂ ಚಿತ್ರರಂಗದ ತಾರೆಯರು ಇದ್ದೇ ಇರ್ತಾರೆ. ಕೆಲವರು ಹಲವು ವರ್ಷಗಳಿಂದ ಪಕ್ಷ, ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದರೆ, ಇನ್ನೂ ಕೆಲವರು ಎಲೆಕ್ಷನ್ ಟೈಮ್‍ನಲ್ಲಿ ಹೊರಗೆ ಬರ್ತಾರೆ. ಅದು ಬಿಡಿ, ಈಗ ಯಾವ್ಯಾವ ಚಿತ್ರತಾರೆಯರು ಅಖಾಡದಲ್ಲಿದ್ದಾರೆ.. ಒಂದ್ಸಲ ನೋಡಿ. 

ಸ್ಪರ್ಧಿಸುತ್ತಿರುವ ತಾರೆಯರು

ಅಂಬರೀಷ್ - ಮಂಡ್ಯ (ಕಾಂಗ್ರೆಸ್)

ಉಮಾಶ್ರೀ - ತೇರದಾಳ (ಕಾಂಗ್ರೆಸ್)

ಸಿ.ಆರ್.ಮನೋಹರ್ - ಬಾಗೇಪಲ್ಲಿ (ಜೆಡಿಎಸ್)

ಸಾಯಿಕುಮಾರ್ - ಬಾಗೇಪಲ್ಲಿ (ಬಿಜೆಪಿ)

ಸಿ.ಪಿ.ಯೋಗೀಶ್ವರ್ - ಚನ್ನಪಟ್ಟಣ (ಬಿಜೆಪಿ)

ಮಧು ಬಂಗಾರಪ್ಪ - ಸೊರಬ (ಜೆಡಿಎಸ್)

ಕುಮಾರ್ ಬಂಗಾರಪ್ಪ - ಸೊರಬ (ಬಿಜೆಪಿ)

ಬಿ.ಸಿ.ಪಾಟೀಲ್ - ಹಿರೇಕರೂರು (ಕಾಂಗ್ರೆಸ್)

ಮುನಿರತ್ನ - ರಾಜರಾಜೇಶ್ವರಿ ನಗರ (ಕಾಂಗ್ರೆಸ್)

ಶಶಿಕುಮಾರ್ - ಹೊಸದುರ್ಗ (ಜೆಡಿಎಸ್)

ಇವರೆಲ್ಲ ಸ್ಪರ್ಧೆಯಲ್ಲಿರುವವರು. ಗೆದ್ದರೆ ಶಾಸಕರಾಗ್ತಾರೆ. ಅವರದ್ದೇ ಪಕ್ಷ ಅಧಿಕಾರಕ್ಕೆ ಬಂದರೆ, ಮಂತ್ರಿಯೂ ಆಗಬಹುದು. ಇನ್ನುಳಿದಂತೆ ಹಲವು ತಾರೆಯರು ಈ ಬಾರಿ ಪ್ರಚಾರದಲ್ಲಿ ಗುರುತಿಸಿಕೊಂಡಿದ್ದಾರೆ.

ಕಾಂಗ್ರೆಸ್‍ನಲ್ಲಿ ಗುರುತಿಸಿಕೊಂಡಿರುವ ತಾರೆಯರು - ಮಾಲಾಶ್ರೀ, ಮುಖ್ಯಮಂತ್ರಿ ಚಂದ್ರು, ಖುಷ್‍ಬೂ, ಚಿರಂಜೀವಿ ಮೊದಲಾದವರಿದ್ದಾರೆ. ಆದರೆ, ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ರಮ್ಯಾ ಇಲ್ಲ ಎನ್ನುವುದೂ ವಿಶೇಷ ಸುದ್ದಿಯೇ.

ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ತಾರೆಯರು - ಹೇಮಾಮಾಲಿನಿ, ಶೃತಿ, ತಾರಾ ಅನುರಾಧಾ, ಜಗ್ಗೇಶ್ ಮೊದಲಾದವರಿದ್ದಾರೆ. ಶಿಲ್ಪಾ ಗಣೇಶ್, ಮಾಳವಿಕಾಗೆ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನವಿಲ್ಲ ಎನ್ನವುದು ಸರ್‍ಪ್ರೈಸ್.

ಜೆಡಿಎಸ್‍ನಲ್ಲಿ ಗುರುತಿಸಿಕೊಂಡಿರುವ ತಾರೆಯರು - ನಿಖಿಲ್ ಕುಮಾರಸ್ವಾಮಿ, ಪೂಜಾ ಗಾಂಧಿ, ರಚಿತಾ ರಾಮ್, ಅಮೂಲ್ಯ ಮೊದಲಾದವರಿದ್ದಾರೆ.

ಅಧಿಕೃತವಾಗಿ ಇಲ್ಲ.. ಆದರೆ.. - ಇನ್ನು ಪ್ರಕಾಶ್ ರೈ ಹಾಗೂ ನಟ ಚೇತನ್ ಯಾವುದೇ ಪಕ್ಷದೊಂದಿಗೆ ಅಧಿಕೃತವಾಗಿ ಗುರುತಿಸಿಕೊಂಡಿಲ್ಲ. ಆದರೆ, ಅವರ ನಿಲುವುಗಳ ಮೂಲಕ ಯಾರಿಗೆ ಮತ ಹಾಕಬೇಕು, ಯಾರಿಗೆ ಬೇಡ ಎಂದು ಪ್ರಚಾರ ಮಾಡುತ್ತಿದ್ದಾರೆ. 

Sagutha Doora Doora Movie Gallery

Popcorn Monkey Tiger Movie Gallery