ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ದುರ್ಯೋಧನನಾಗಿರುವುದು ಹೊಸ ವಿಷಯವೇನೂ ಅಲ್ಲ. ದರ್ಶನ್ ಅವರ ಅಭಿನಯದ 50ನೇ ಸಿನಿಮಾ ಕುರುಕ್ಷೇತ್ರದಲ್ಲಿ ದರ್ಶನ್ ಅವರ ದುರ್ಯೋಧನನ ಲುಕ್ಕು ಮತ್ತು ಅವರ ಆ ನಗು ಅಭಿಮಾನಿಗಳನ್ನು ಇನ್ನಷ್ಟು ಮತ್ತಷ್ಟು ಹುಚ್ಚೆಬ್ಬಿಸಿರುವುದು ನಿಜ. ಈಗ ಆ ದುರ್ಯೋಧನನಿಗೇ ದುರ್ಯೋಧನನ ಉಡುಗೊರೆ ಕೊಟ್ಟಿದ್ದಾರೆ ದರ್ಶನ್‍ರ ಒಬ್ಬ ಅಭಿಮಾನಿ.
ಕಿರಣ್ ಎಂಬ ಈ ಯುವಕ ದರ್ಶನ್‍ರ ಅಭಿಮಾನಿ. ಇವರ ಮದುವೆಗೆ ದರ್ಶನ್ ಅವರಿಗೆ ಆಹ್ವಾನ ಪತ್ರಿಕೆ ಕೊಡಲು ಹೋಗುವಾಗ, ಏನಾದರೂ ಗಿಫ್ಟ್ ತೆಗೆದುಕೊಂಡು ಎಂದುಕೊಂಡರಂತೆ. ಆಗ ದರ್ಶನ್ ಅವರು ದುರ್ಯೋಧನನ ಗೆಟಪ್ಪಿನಲ್ಲಿರುವ ಈ ಫೋಟೋವನ್ನು ಡಿಸೈನ್ ಮಾಡಿಸಿ, ದರ್ಶನ್‍ಗೆ ಉಡುಗೊರೆಯಾಗಿ ಕೊಟ್ಟಿದ್ದಾರೆ ದರ್ಶನ್.
ಪೇಂಯ್ಟಿಂಗ್‍ನಲ್ಲಿ ಅರಳಿರುವ ಈ ಫೋಟೋ ದರ್ಶನ್ ಅವರಿಗೂ ಇಷ್ಟವಾಗಿದೆ.